Blog

ಹೆಸರು ಬದಲಾಯಿಸಿಕೊಂಡ ಆರ್‌ಸಿಬಿ ತಂಡ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( Royal Challengers Bangalore), ಈಗ ತನ್ನ ತಂಡದ ಹೆಸರನ್ನು ಬದಲಾಯಿಸಿಕೊಂಡಿದೆ.

2008ರ ಮೊದಲನೇ ಸೀಸನ್ ಐಪಿಎಲ್ ನಲ್ಲಿ ಕಣಕ್ಕಿಳಿದ ಎಂಟು ತಂಡಗಳಲ್ಲಿ ಒಂದಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್‌ನಲ್ಲಿ 16 ವರ್ಷಗಳ ಸುಧೀರ್ಘ ಪಯಣವನ್ನು ಮಾಡಿದೆ. ಇಲ್ಲಿಯ ತನಕ ತಂಡದ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಎಂದು ಇಡಲಾಗಿತ್ತು, ಆದರೆ ಇನ್ನು ಮುಂದೆ ಈ ತಂಡದ ಹೆಸರಲ್ಲಿ ಬದಲಾವಣೆ ಆಗಲಿದೆ.

ಮಾರ್ಚ್ 19 ರಿಂದ ಪ್ರಾರಂಭವಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( Royal Challengers Bangalore) ನ್ನು, ರಾಯಲ್ ಚಾಲೆಂಜರ್ಸ್ ಬೆಂಗಳೂರು ( Royal Challengers Bengaluru) ಎಂದು ಬದಲಾವಣೆ ಮಾಡಲಾಗುವುದು ಎಂದು ಅಧಿಕೃತವಾಗಿ ಹೇಳಿದ್ದಾರೆ. ಇನ್ನುಮುಂದೆ ‘Banglore’ ಎಂಬ ತಪ್ಪು ನಾಮಧೇಯವನ್ನು ಬದಲಿಸಿ, ‘Bengaluru’ ಎಂಬ ಸರಿಯಾದ ಹೆಸರನ್ನು ಇಡಲಾಗಿದೆ. ಇದರಿಂದ ಲಕ್ಷಾಂತರ ಅಭಿಮಾನಿಗಳ ದಶಕದ ಬೇಡಿಕೆಯನ್ನು ಪೂರೈಸಿದಂತಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button