ಬೆಂಗಳೂರು: ಮಾರ್ಚ್ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್ ಆವೃತ್ತಿಯ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮನೆಯಂಗಳದಲ್ಲಿ ಮೊದಲ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬೌಲಿಂಗ್ ಆಯ್ಕೆಯನ್ನು ಮಾಡಿದರು. ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 176 ರನ್ ಗಳನ್ನು ಕಲೆ ಹಾಕಲು ಶಕ್ತವಾಯಿತು.
177 ರನ್ನುಗಳನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 19.2 ಓವರ್ ಗಳಲ್ಲಿ 178 ರನ್ನುಗಳನ್ನು ಗಳಿಸಿ ವಿಜಯಪತಾಕೆಯನ್ನು ಹಾರಿಸಿದರು. ಆರ್‌ಸಿಬಿ ಪರವಾಗಿ ವಿರಾಟ್ ಕೊಹ್ಲಿ 49 ಬಾಲ್‌ಗಳಲ್ಲಿ 77 ರನ್‌ಗಳನ್ನು ಗಳಿಸಿ ‘ಮ್ಯಾನ್ ಆಫ್ ದಿ ಮ್ಯಾಚ್’ ಗೌರವಕ್ಕೆ ಪಾತ್ರರಾದರು.
ಕೊನೆಯ ಓವರ್ ನಲ್ಲಿ 9 ರನ್‌ಗಳ ಗುರಿ ಹೊಂದಿದ್ದ ಆರ್‌ಸಿಬಿ ತಂಡಕ್ಕೆ ನೆರವಾಗಿ ಬಂದ ದಿನೇಶ್ ಕಾರ್ತಿಕ್, ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. 10 ಬಾಲ್ ಗಳಲ್ಲಿ 28 ರನ್ನುಗಳನ್ನು ಗಳಿಸಿದ ದಿನೇಶ್ ಕಾರ್ತಿಕ್ ಒಬ್ಬ ಅತ್ಯುತ್ತಮ ಫಿನಿಶರ್ ಎಂದು ಇನ್ನೊಮ್ಮೆ ತೋರಿಸಿಕೊಟ್ಟರು.