Sports

ಹೊಸ ಹೆಜ್ಜೆ, ಹೊಸ ಹುರುಪು; “ಇದು ಆರ್‌ಸಿಬಿ ಹೊಸ ಅಧ್ಯಾಯ..!”

ಬಹುನಿರೀಕ್ಷಿತ ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ (RCB Unbox Event) ಮಂಗಳವಾರ ಮಾ.19ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ನ ಹೈಲೈಟ್ಸ್‌ ಇಲ್ಲಿದೆ

  • ಆರ್‌ಸಿಬಿ ಅನ್‌ಬಾಕ್ಸ್‌ 2.0 ಇವೆಂಟ್‌ನಲ್ಲಿ ಎಬಿಡಿ, ಕ್ರಿಸ್‌ ಗೇಲ್‌ ಭಾಗಿ
  • ಕನ್ನಡದಲ್ಲಿ ಮಾತನಾಡಿದ ಕೊಹ್ಲಿ!
  • ವಿಶ್ವವಿಖ್ಯಾತ ಡಿಜೆ ಅಲೆನ್‌ ವಾಕರ್‌ ಸ್ಟೇಜ್‌ ಪರ್ಫಾಮೆನ್ಸ್‌
  • ಮಹಿಳಾ ಚಾಂಪಿಯನ್ಸ್‌ಗೆ ಗಾರ್ಡ್‌ ಆಫ್‌ ಆನರ್

ಹೊಸ ಜೆರ್ಸಿ! ಹೊಸ ಲೋಗೊ!
ಹೆಸರಿನ ಜೊತೆಗೆ ಹೊಸ ಲೋಗೊ ಹಾಗೂ ಹೊಸ ಜೆರ್ಸಿಯನ್ನು ಕೂಡ ಆರ್‌ಸಿಬಿ ಈ ಅನ್‌ಬಾಕ್ಸ್‌ ಇವೆಂಟ್‌ನಲ್ಲಿ ಅನಾವರಣಗೊಳಿಸಿದೆ. ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಹಾಗೂ ಆರ್‌ಸಿಬಿ ಪುರುಷರ ತಂಡದ ನಾಯಕ ಫಾಪ್‌ ಡು ಪ್ಲೆಸಿಸ್‌ ನೂತನ ಜೆರ್ಸಿ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಸೃತಿ ಮಂಧಾನ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಹೊಸ ಜೆರ್ಸಿ ವಿತರಿಸಿದರು.

ಕನ್ನಡದಲ್ಲಿ ಮಾತನಾಡಿದ ಕಿಂಗ್‌ ಕೊಹ್ಲಿ.
ಜೆರ್ಸಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿರಾಟ್‌ ಕೊಹ್ಲಿ ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಹೇಳುವ ಮೂಲಕ ಅಭಿಮಾನಿಗಳನ್ನು ಸಂತಸ ಪಡಿಸಿದರು.

ಆರ್‌ಸಿಬಿ ಮಹಿಳಾ ಚಾಂಪಿಯನ್ಸ್‌ಗೆ ಗೌರವ
WPL2024ರ ಚಾಂಪಿಯನ್ಸ್‌ ಆಗಿ ಹೊರಹೊಮ್ಮಿದ ಆರ್‌ಸಿಬಿ ವನಿತೆಯರಿಗೆ ಆರ್‌ಸಿಬಿ ಪುರುಷರ ತಂಡ ವಿಶೇಷ ಗೌರವ ಸೂಚಿಸಿ ಅಭಿನಂದಿಸಿದರು.

WPL 2024 ಆರ್‌ಸಿಬಿ ಮಹಿಳಾ ಚಾಂಪಿಯನ್ಸ್‌ಗೆ ಗಾರ್ಡ್‌ ಆಫ್‌ ಆನರ್.

ಆರ್‌ಸಿಬಿ ಹಾಲ್‌ ಆಫ್‌ ಫೇಮ್‌ನಲ್ಲಿ ವಿನಯ್‌ ಕುಮಾರ್!
ಆರ್‌ಸಿಬಿ ಫ್ರಾಂಚೈಸಿಯ ಮಾಜಿ ಬೌಲರ್, ದಾವಣಗೆರೆ ಎಕ್ಸ್‌ಪ್ರೆಸ್‌ ಎಂದೇ ಖ್ಯಾತಿ ಪಡೆದ ಕನ್ನಡಿಗ ವಿನಯ್‌ ಕುಮಾರ್‌ ಅವರಿಗೆ ಆರ್‌ಸಿಬಿ ಹಾಲ್‌ ಆಫ್‌ ಫೇಮ್‌ನಲ್ಲಿ ಸ್ಥಾನ! ಈ ಮೂಲಕ ಎ ಬಿ ಡಿವಿಲಿಯರ್ಸ್‌ ಮತ್ತು ಕ್ರಿಸ್‌ ಗೇಲ್‌ ಬಳಿಕ ಆರ್‌ಸಿಬಿ ಹಾಲ್‌ ಆಫ್‌ ಫೇಮ್‌ ಪಟ್ಟಿಗೆ ಸೇರಿಕೊಂಡ ಮೂರನೇ ಆಟಗಾರ ಎನಿಸಿಕೊಂಡರು. ವಿನಯ್‌ ಕುಮಾರ್‌ ಆರ್‌ಸಿಬಿ ತಂಡಕ್ಕಾಗಿ‌ ಅತಿ ಹೆಚ್ಚು ವಿಕೆಟ್‌ ಪಡೆದ ಮೂರನೇ ಬೌಲರ್!

Show More

Related Articles

Leave a Reply

Your email address will not be published. Required fields are marked *

Back to top button