India
ಮತ್ತೆ ರೆಪೋ ರೇಟ್ ಸ್ಥಿರ.

ಮುಂಬೈ: ದೇಶದ ಬ್ಯಾಂಕುಗಳ ಬ್ಯಾಂಕ್ ಎಂದು ಖ್ಯಾತಿ ಪಡೆದಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಮಾನಿಟರಿ ಪಾಲಿಸಿ ಸಭೆಯನ್ನು ನಡೆಸಿದೆ. ದೇಶದಲ್ಲಿ ಚುನಾವಣೆ ನಡೆದು ಫಲಿತಾಂಶ ಹೊರಬಂದ ನಂತರ, ರೆಪೋ ದರದಲ್ಲಿ ಮೇಲೆ ಕೆಳಗೆ ಆಗಲಿದೆ ಎಂದು ಹಲವಾರು ಜನ ಕಾಯುತ್ತಿದ್ದರು.
ಆದರೆ ಮತ್ತೆ ಭಾರತೀಯರ ಊಹೆ ಸುಳ್ಳಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೋ ರೇಟ್ ನಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೆ ಸ್ಥಿರವಾಗಿ 6.5% ದರದಲ್ಲಿ ಮುಂದುವರೆಸಿಕೊಂಡು ಹೋಗಲಿದೆ.