India

ರೆಪೋ ರೇಟ್ ಘೋಷಿಸಿದ ಆರ್‌ಬಿ‌ಐ.

ನವದೆಹಲಿ: ಬ್ಯಾಂಕುಗಳ ಬ್ಯಾಂಕು ಎಂದು ಕರೆಸಿಕೊಳ್ಳುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದು ತನ್ನ ಮಾನಿಟರಿ ಪಾಲಿಸಿ ಸಭೆಯನ್ನು ನಡೆಸಿದೆ. ಹಣಕಾಸು ವರ್ಷ 2025ರ ರಿಪೋ ರೇಟ್ ಅನ್ನು 6.5% ದರದಲ್ಲಿಯೇ ಮುಂದುವರಿಸಲಿದೆ. ಸತತ ಏಳು ವಿತ್ತೀಯ ನೀತಿಗಳ ಸಭೆಗಳಿಂದ ಈ ದರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದಿಟ್ಟುಕೊಂಡು ಬಂದಿದೆ.

ಇದೇ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಗ್ರಾಹಕರ ದರ ಸೂಚ್ಯಂಕ ಹಣದುಬ್ಬರದ ಅಂಕಿ ಅಂಶವನ್ನು ಕೂಡ ಬಿಡುಗಡೆ ಮಾಡಿದ್ದು. ಈ ವರ್ಷ 4.5% ದರದಲ್ಲಿ ಈ ಹಣದುಬ್ಬರ ಮುಂದುವರೆಯಲಿದೆ ಎಂದು ಅಂದಾಜಿ‌ಸಿದೆ. ಹಿಂದಿನ ಫೆಬ್ರವರಿ ತಿಂಗಳಲ್ಲಿ ಸಿಪಿಐ 5.1% ಕ್ಕೆ ಬಂದು ತಲುಪಿತ್ತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ವರ್ಷ 2024ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯನ್ನು 7.6% ಎಂದು ಅಂದಾಜಿಸಿತ್ತು. ಹಿಂದಿನ ನಾಲ್ಕು ಕ್ವಾರ್ಟರ್ಸ್ ನ್ನು ಗಮನಿಸಿ, ಈ ವರ್ಷ ಇದನ್ನು 7% ಗೆ ಕಡಿತಗೊಳಿಸಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ನಮ್ಮ ಜಿಡಿಪಿ ಬೆಳವಣಿಗೆ ದರ ಕಡಿಮೆ ಆಗಿರುವುದು, ಜಾಗತಿಕ ರಾಜಕೀಯ ಬಿಕ್ಕಟ್ಟು ಹಾಗೂ ದೇಶಿಯ ಸಮಸ್ಯೆಗಳಿಂದಾಗಿದೆ ಎಂದು ಅಂದಾಜಿಸಲಾಗಿದೆ.

Show More

Leave a Reply

Your email address will not be published. Required fields are marked *

Related Articles

Back to top button