ಬೆಳಗಾವಿಯಲ್ಲಿ ದರೋಡೆ ಪ್ರಕರಣ: ದೂರದಾರನ ಮೇಲೆಯೇ ಅನುಮಾನ ಪಟ್ಟ ಪೋಲಿಸ್..?!
ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಕಾರು ಅಡ್ಡಗಟ್ಟಿ ಹಣ ದರೋಡೆ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದರೋಡೆಕೋರರ ಯೋಜನೆಗೆ ದೂರುದಾರನೂ ಭಾಗಿಯಾಗಿದ್ದಾನೆ ಎಂಬ ಶಂಕೆಯ ಮೇಲೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ದೂರುದಾರನ ಮೇಲೂ ಶಂಕೆ!
ಪ್ರಾಥಮಿಕ ತನಿಖೆಯ ಪ್ರಕಾರ, ದರೋಡೆಯ ಸಂದರ್ಭದಲ್ಲಿ ದೂರುದಾರ ಮತ್ತು ಇಬ್ಬರು ಆರೋಪಿಗಳು ಹಣ ದೋಚಲು ಪೂರ್ವ ಯೋಜನೆ ಮಾಡಿರುವ ಸಾಧ್ಯತೆಯ ಸುಳಿವು ಪೊಲೀಸರಿಗೆ ಸಿಕ್ಕಿದೆ. ಈ ದರೋಡೆ ಒಂದು ಬೃಹತ್ ಷಡ್ಯಂತ್ರವಾಗಿದೆಯೇ ಎಂಬ ಪ್ರಶ್ನೆಗಳು ಹುಟ್ಟಿವೆ.
ಮೂರು ಮಂದಿ ವಶಕ್ಕೆ
ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ಹಿಂದಿನ ಚಟುವಟಿಕೆಗಳ ವಿವರಗಳನ್ನು ಬೆಳಕಿಗೆ ತರುವ ದಿಸೆಯಲ್ಲಿ ಕಠಿಣ ವಿಚಾರಣೆ ನಡೆಸಲಾಗುತ್ತಿದೆ. ಅಷ್ಟು ಮಾತ್ರವಲ್ಲ, ದರೋಡೆ ವೇಳೆ ಬಳಸಲಾದ ವಾಹನಗಳು ಮತ್ತು ಇತರ ಸಹಭಾಗಿಗಳ ಹೆಸರುಗಳನ್ನು ಪತ್ತೆಹಚ್ಚಲು ಪೊಲೀಸರು ಶ್ರಮಿಸುತ್ತಿದ್ದಾರೆ.
ದೂರುದಾರನ ಹಿಂದೆ ಬಿದ್ದ ಪೊಲೀಸರು!
ಪ್ರಕರಣ ಹೊಸ ತಿರುವು ಪಡೆಯುವ ನಡುವೆ ದೂರುದಾರನ ಮೇಲೂ ಆಳವಾದ ಶಂಕೆ ಮೂಡಿದ್ದು, ಇದರ ಹಿಂದೆ ಬೇರೊಂದು ಕಥೆ ಇದೆ ಎಂಬ ಚರ್ಚೆ ಸಾರ್ವಜನಿಕರಲ್ಲಿ ಜೋರಾಗಿದೆ. ದೂರುದಾರನ ಆರ್ಥಿಕ ಹಿನ್ನೆಲೆ ಮತ್ತು ಸಂಬಂಧಪಟ್ಟ ಆಪ್ತರ ನಂಟುಗಳ ಮೇಲೂ ಪೊಲೀಸರ ಕಣ್ಣು ಬಿದ್ದಿದೆ.
ಜನತೆಗೆ ಎಚ್ಚರಿಕೆ:
ಬೆಳಗಾವಿಯ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್ಪಿ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲು ವಿನಂತಿಸಿದ್ದಾರೆ.