ರಣಜಿ ಪಂದ್ಯದಲ್ಲಿ ರೋಹಿತ್ ಶರ್ಮಾ ನಿರಾಸೆಯ ಪ್ರದರ್ಶನ: ಕ್ರಿಕೆಟ್ ಲೋಕದಲ್ಲಿ ಬಿಸಿಸಿಐಗೆ ಮುಖಭಂಗ?

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಆಕರ್ಷಕ ಬ್ಯಾಂಟಿಂಗ್ ಮತ್ತೆ ಮುಗ್ಗರಿಸಿತು. ರಣಜಿ ಟ್ರೋಫಿಯಲ್ಲಿ ಮುಂಬೈ ವಿರುದ್ಧ ಜಮ್ಮು ಮತ್ತು ಕಾಶ್ಮೀರ ನಡುವಿನ ಪಂದ್ಯದಲ್ಲಿ, ರೋಹಿತ್ ಕೇವಲ 3 ರನ್ ಗಳಿಸಿ ಔಟಾದರು. 2015ರ ನಂತರ ಇದೇ ಮೊದಲ ಬಾರಿಗೆ ರಣಜಿ ಪಂದ್ಯ ಆಡಿದ ರೋಹಿತ್, ಜಮ್ಮು-ಕಾಶ್ಮೀರ ಬೌಲರ್ ಉಮರ್ ನಜೀರ್ ಮೀರ್ ಬೌನ್ಸರ್ ಎದುರು ತಡಕಾಡಿ ಔಟಾದರು. ಕೇವಲ 19 ಎಸೆತಗಳಲ್ಲಿ 3 ರನ್ ಮಾಡಿದ ರೋಹಿತ್, ಪಾರಾಸ್ ಡೋಗ್ರಾ ಕೈಗಳಲ್ಲಿ ಕ್ಯಾಚ್ ನೀಡಿ ಮಣಿಯುವಂತಾಯಿತು.
ಚಾಂಪಿಯನ್ಸ್ ಟ್ರೋಫಿ: ಬಿಸಿಸಿಐಗೆ ಮುಖಭಂಗ..?!
2025ರ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ, ಭಾರತ ತಂಡದ ಜರ್ಸಿಯ ಮೇಲೆ ಪಾಕಿಸ್ತಾನದ ಹೆಸರು ಇರಬಾರದು ಎಂಬ ಬಿಸಿಸಿಐ ನಿರ್ಧಾರ ವಿವಾದಕ್ಕೆ ಕಾರಣವಾಗಿತ್ತು. ಆದರೆ ಈಗ ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾರ್ಗಸೂಚಿಯನ್ನು ಅನುಸರಿಸಿ, ಪಾಕಿಸ್ತಾನದ ಹೆಸರು ಜರ್ಸಿಯ ಮೇಲೆ ಇರಲು ಒಪ್ಪಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿ, “ನಾವು ಐಸಿಸಿ ನಿಯಮಗಳನ್ನು ಪಾಲಿಸುತ್ತೇವೆ,” ಎಂದು ತಿಳಿಸಿದ್ದಾರೆ. 2025ರ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿರುವ ಈ ಟೂರ್ನಿಯ ಬಹುಭಾಗದ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸದಿರುವ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೈಬ್ರಿಡ್ ಮಾದರಿಯನ್ನು ಅನುಮೋದಿಸಿದೆ.
ಹೈಬ್ರಿಡ್ ಮಾದರಿ ಎಂದರೇನು?
ಪಾಕಿಸ್ತಾನ ಈ ಬಾರಿ ಆತಿಥ್ಯ ಹೊಂದಿದ್ದರೂ ಆಗಿದ್ದರೂ, ಭಾರತ ತಂಡದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಇದು ಎರಡೂ ದೇಶಗಳ ನಡುವಿನ ರಾಜಕೀಯ ಸಮಸ್ಯೆಗಳ ಮಧ್ಯೆ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷವನ್ನು ನೀಡುವ ನಿರ್ಧಾರವಾಗಿದೆ.