Job News

RRB NTPC 2025: ಪರೀಕ್ಷೆ ದಿನಾಂಕ, ಪ್ರವೇಶ ಪತ್ರ ಪ್ರಕಟಣೆಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ!

ಬೆಂಗಳೂರು: ಭಾರತೀಯ ರೈಲ್ವೆಯ ಆರ್‌ಆರ್‌ಬಿ ಎನ್‌ಟಿಪಿಸಿ (RRB NTPC) 2025 ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರೀಕ್ಷೆ ದಿನಾಂಕ ಮತ್ತು ಪ್ರವೇಶ ಪತ್ರಗಳನ್ನು ಶೀಘ್ರದಲ್ಲೇ ಆನ್‌ಲೈನ್‌ ಮೂಲಕ ಬಿಡುಗಡೆ ಮಾಡಲಾಗುವುದು. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರಾದೇಶಿಕ RRB ವೆಬ್‌ಸೈಟ್‌ಗಳಲ್ಲಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದು.

ನೇಮಕಾತಿ ಹುದ್ದೆಗಳ ವಿವರ:
ಈ ಬಾರಿ 11,558 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಇದರಲ್ಲಿ:

  • 8,113 ಹುದ್ದೆಗಳು ಸ್ನಾತಕೋತ್ತರ ಅಭ್ಯರ್ಥಿಗಳಿಗೆ
  • 3,445 ಹುದ್ದೆಗಳು ಪದವಿ ಮಟ್ಟದ ಅಭ್ಯರ್ಥಿಗಳಿಗೆ

ಹುದ್ದೆಗಳ ಪಟ್ಟಿ:
ನಾನ್-ಟೆಕ್ನಿಕಲ್ ಹುದ್ದೆಗಳಾದ ಕ್ಲರ್ಕ್‌, ಟೈಪಿಸ್ಟ್‌, ಟ್ರಾಫಿಕ್‌ ಅಸಿಸ್ಟಂಟ್‌ ಹೀಗೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?
ಪ್ರವೇಶ ಪತ್ರ ಬಿಡುಗಡೆಯಾದ ಬಳಿಕ ಈ ಹಂತಗಳನ್ನು ಅನುಸರಿಸಿ:

  • ಪ್ರಾದೇಶಿಕ RRB ವೆಬ್‌ಸೈಟ್‌ಗೆ ಭೇಟಿ ನೀಡಿ
  • RRB NTPC Admit Card 2025 ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಲಾಗಿನ್ ಮಾಹಿತಿ ನಮೂದಿಸಿ
  • ಪ್ರವೇಶ ಪತ್ರವು ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ
  • ಡೌನ್‌ಲೋಡ್ ಮಾಡಿ, pdf ಸಂಗ್ರಹಿಸಿ
  • ಪರೀಕ್ಷೆಗೆ ಹಾಜರಾಗುವಾಗ ಇದು ಅನಿವಾರ್ಯ

ಪ್ರಾದೇಶಿಕ RRB ವೆಬ್‌ಸೈಟ್‌:
ಕರ್ನಾಟಕದವರು ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಈ ಪ್ರಾದೇಶಿಕ RRB ವೆಬ್‌ಸೈಟ್‌ನ್ನು ಬಳಸಿ:

RRB ಬೆಂಗಳೂರು: www.rrbbnc.gov.in

ಹೆಚ್ಚುವರಿ ಮಾಹಿತಿಗೆ:
ಪರೀಕ್ಷಾ ವೇಳಾಪಟ್ಟಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಂಡ ನಂತರ ಎಲ್ಲಾ ಪ್ರಮುಖ ಮಾಹಿತಿಗಳನ್ನು ದಯವಿಟ್ಟು ಪರಿಶೀಲಿಸಿ.

Show More

Leave a Reply

Your email address will not be published. Required fields are marked *

Related Articles

Back to top button