TechnologyWorldWorld

ಗೂಗಲ್‌ಗೆ $2.5 ಡೆಸಿಲಿಯನ್ ದಂಡ ವಿಧಿಸಿದ ರಷ್ಯಾ: ಇಷ್ಟೊಂದು ಹಣವನ್ನು ಗೂಗಲ್ ಕನಸಿನಲ್ಲೂ ಎಣಿಸಿಲ್ಲ..?!

ಮಾಸ್ಕೋ: ಗೂಗಲ್ ತಾನು ಕಟ್ಟಲಾರದ ಅಸಾಧ್ಯ ಮೊತ್ತದ ದಂಡಕ್ಕೆ ರಷ್ಯಾದಲ್ಲಿ ಒಳಗಾಗಿದೆ ಎಂಬ ವರದಿಗಳು ಎಲ್ಲರ ಗಮನ ಸೆಳೆದಿವೆ. ಸುಮಾರು $2.5 ಡೆಸಿಲಿಯನ್ (ಅಥವಾ 1ರ ಮುಂದೆ 33 ಶೂನ್ಯಗಳು) ದಂಡವನ್ನು ಕಾಯ್ದಿರಿಸಿದ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಗೂಗಲ್ ಗೆ ತೀವ್ರ ಆಘಾತ ಎದುರಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ದಶಕಗಳಿಂದ ರಷ್ಯಾ ರಾಷ್ಟ್ರಪತಿಗಳ ಪ್ರೋತ್ಸಾಹಿತ ಚಾನೆಲ್‌ಗಳು ಮತ್ತು ಸರ್ಕಾರಿ ಮಾಧ್ಯಮಗಳನ್ನು ಯೂಟ್ಯೂಬ್ ನಲ್ಲಿ ಪುನಃ ಸಕ್ರಿಯಗೊಳಿಸಲು ನಿರಾಕರಿಸಿರುವುದಕ್ಕಾಗಿ ಈ ದಂಡವನ್ನು ವಿಧಿಸಲಾಗಿದೆ.

ರಷ್ಯಾದಿಂದ ಉಗ್ರ ಕ್ರಮ:

2020ರಿಂದ, ಪ್ರೋ-ಕ್ರೆಮ್ಲಿನ್ ಮಾಧ್ಯಮಗಳು, ಟೆಸರ್‌ಗ್ರಾಡ್ ಮತ್ತು ಆರ್‌ಐಎ ಫ್ಯಾನ್ ಕೋರ್ಟ್ ಗೆ ದೂರು ದಾಖಲಿಸಿದ ನಂತರ, ಗೂಗಲ್‌ ಮೇಲೆ ದಿನಕ್ಕೆ 100,000 ರೂಬಲ್ ದಂಡ ವಿಧಿಸಲಾಯಿತು. ಇವು ವಾರ ಕಳೆದಂತೆ ಗರಿಷ್ಠ ಪ್ರಮಾಣವನ್ನು ತಲುಪಿದವು. ಅಂತಿಮವಾಗಿ ಇದು 2 ಡೆಸಿಲಿಯನ್ ರೂಬಲ್‌ಗೆ ಬಂದು ತಲುಪಿದೆ.

ಡೆಸಿಲಿಯನ್ ಅಂದರೆ ಎಷ್ಟು?

ಡೆಸಿಲಿಯನ್ ಅಂದರೆ 1ರ ಮುಂದೆ 33 ಶೂನ್ಯಗಳು. ಇದು ಎಷ್ಟು ದೊಡ್ಡ ಸಂಖ್ಯೆಯೆಂದರೆ ಅಲ್ಫಬೆಟ್ ಸಂಸ್ಥೆಯು 2023ರಂತೆ ಪ್ರತಿವರ್ಷ 307 ಬಿಲಿಯನ್ ಡಾಲರ್ ಆದಾಯವನ್ನು ವರದಿ ಮಾಡಿದರೂ, ಗೂಗಲ್ ಈ ಮೊತ್ತವನ್ನು ತೀರಿಸಲಾಗದು. ಗೂಗಲ್ ತನ್ನ ರಷ್ಯನ್ ಘಟಕವನ್ನು 2022 ರಲ್ಲಿ ದಿವಾಳಿಯಾಗಿರುವುದಾಗಿ ಘೋಷಿಸಿತ್ತು ಮತ್ತು ಪಶ್ಚಿಮದ ಆರ್ಥಿಕ ನಿರ್ಬಂಧಗಳನ್ನು ಅನುಸರಿಸಲು ಜಾಹೀರಾತುಗಳನ್ನು ಕೂಡ ನಿಲ್ಲಿಸಿತ್ತು.

Show More

Related Articles

Leave a Reply

Your email address will not be published. Required fields are marked *

Back to top button