ರಷ್ಯಾದಲ್ಲಿ ಮೋಸ ಹೋದ ಭಾರತೀಯ ಯುವಕ, ಇಂದು ಉಕ್ರೇನ್ ಯುದ್ಧದಲ್ಲಿ ಸಾವು.

ಹೈದರಾಬಾದ್ ಮೂಲದ ಯುವಕ ಮೊಹಮ್ಮದ್ ಅಸ್ಫಾನ್ ಸೇರಿದಂತೆ ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ಇಬ್ಬರು ಯುವಕರಿಗೆ, ರಷ್ಯಾ ಸರ್ಕಾರದ ಕಚೇರಿಯಲ್ಲಿ ಸಹಾಯಕರಾಗಿ ಉದ್ಯೋಗ ನೀಡುವ ಭರವಸೆಯೊಂದಿಗೆ ದುಬೈ ಏಜೆಂಟ್‌ಗಳ ಮೂಲಕ ರಷ್ಯಾ ತಲುಪಿಸಲಾಗಿತ್ತು. ಆ ನಕಲಿ ಏಜೆಂಟ್‌ಗಳು ಮೊಹಮ್ಮದ್ ಅಸ್ಫಾನ್ ಸೇರಿದಂತೆ ಉಳಿದ ಮೂರು ಯುವಕರ ಬಳಿ ತಲಾ 3 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಅಸ್ಫಾನ್ ಸಹೋದರ ಮೊಹಮ್ಮದ್ ಇಮ್ರಾನ್ ಹೇಳಿದ್ದಾರೆ.

ಮೋಸ್ಕೊ ತಲುಪಿದ ನಂತರ ಮೊಹಮ್ಮದ್ ಅಸ್ಫಾನ್ ಹಾಗೂ ಇನ್ನುಳಿದ ಮೂರು ಯುವಕರ ಬಳಿ ಒಂದು ಡಾಕ್ಯುಮೆಂಟಿಗೆ ಸಹಿ ತೆಗೆದುಕೊಳ್ಳಲಾಗುತ್ತದೆ. ಅದಾದ ನಂತರವೇ ಈ ಮೂವರು ಯುವಕರಿಗೆ ತಿಳಿದು ಬರುತ್ತದೆ ತಾವು ರಷ್ಯಾದ ಸೈನ್ಯಕ್ಕೆ ಸಹಾಯಕರಾಗಿ ನೇಮಕವಾಗಿದ್ದೇವೆ ಎಂದು.
ಇದಾದ ನಂತರ ಮೊಹಮ್ಮದ್ ಅಸ್ಫಾನ್ ಏಜೆಂಟರಿಗೆ “ನಮಗೆ ಇಲ್ಲಿ ಯುದ್ಧ ಸಾಮಗ್ರಿಗಳನ್ನು ಬಳಸಲು ತರಬೇತಿ ನೀಡುತ್ತಿದ್ದಾರೆ”. ಎಂದು ಆರೋಪಿಸಿದ್ದ. ಆದರೆ ಅವೆಲ್ಲವೂ ಉದ್ಯೋಗದ ಒಂದು ಭಾಗ ಎಂದು ಏಜೆಂಟ್ ಸುಳ್ಳು ಹೇಳಿದ್ದರು. ತದನಂತರ ಈ ಯುವಕರನ್ನು ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾ ಸೈನ್ಯ ಉಕ್ರೇನ್ ಗಡಿಯಲ್ಲಿ ನಿಯೋಜಿಸುತ್ತದೆ.
ಮೊಹಮ್ಮದ್ ಅಸ್ಫಾನ್ ಕಳೆದ ಡಿಸೆಂಬರ್ 31, 2023ರಂದು ತನ್ನ ಕುಟುಂಬದೊಂದಿಗೆ ಕೊನೆಯದಾಗಿ ಮಾತನಾಡಿದ್ದನು. ಆದರೆ ಇಂದು ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಮೋಸಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸಂಪೂರ್ಣ ಮಾಹಿತಿ ನೀಡಿದ್ದು, ಮೃತ ದೇಹವನ್ನು ತಾಯ್ನುಡಿಗೆ ರವಾನಿಸುವ ಎಲ್ಲಾ ವ್ಯವಸ್ಥೆ ನಡೆಯುತ್ತಿದೆ ಎಂದು ತಿಳಿಸಿದೆ.