Politics
ರಷ್ಯಾ-ಉಕ್ರೇನ್ ಯುದ್ಧ: ರಷ್ಯಾದ ಭಯಾನಕ ದಾಳಿಗೆ ಸ್ತಬ್ಧವಾದ ಉಕ್ರೇನ್..!
ರಷ್ಯಾ ಉಕ್ರೇನ್ ಮೇಲೆ ಭಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ದೇಶಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಕಿವ್ ನಲ್ಲಿ ಕನಿಷ್ಠ ಏಳು ಸ್ಫೋಟಗಳು ಕೇಳಿಬಂದಿವೆ, ಇದರಿಂದ ದೇಶಾದ್ಯಂತ ತುರ್ತು ಪರಿಸ್ಥಿತಿ ಮಾಡಲಾಯಿತು. ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಪಶ್ಚಿಮ ಲುಟ್‌ಸ್ಕ್, ಪೂರ್ವ ಡ್ನಿಪ್ರೋ ಮತ್ತು ದಕ್ಷಿಣ ಝಪೊರಿಝ್ಜಿಯಾ ಪ್ರದೇಶಗಳಲ್ಲಿ ಈ ಸಾವಿನ ಪ್ರಕರಣಗಳು ವರದಿಯಾಗಿವೆ.
ಉಕ್ರೇನ್ ವಾಯುಪಡೆಯ ಪ್ರಕಾರ, ರಷ್ಯಾ 11 ಟಿಯು-95 ಬಾಂಬರ್‌ಗಳನ್ನು ಬಳಸಿಕೊಂಡು ಹಲವು ಕ್ಷಿಪಣಿಗಳನ್ನು ಉಕ್ರೇನ್ ಕಡೆಗೆ ಉಡಾಯಿಸಿದೆ. ಬಹಳಷ್ಟು ರಷ್ಯಾದ ಡ್ರೋನ್‌ಗಳು ಉಕ್ರೇನ್‌ನ ಪೂರ್ವ, ಉತ್ತರ, ದಕ್ಷಿಣ ಮತ್ತು ಮಧ್ಯ ಭಾಗಗಳತ್ತ ಚಲಿಸುತ್ತಿವೆ ಎಂದು ವರದಿಯಾಗಿದೆ.
ದಾಳಿಯ ನಂತರ ಉಕ್ರೇನ್‌ನಲ್ಲಿ ವ್ಯಾಪಕ ಆತಂಕ ಮನೆಮಾಡಿದೆ, ಇನ್ನೂ ಅನೇಕ ಪ್ರದೇಶಗಳಲ್ಲಿ ಹೆಚ್ಚಿನ ದಾಳಿಗಳ ಭಯವಿದೆ.