ಕಾಶಿನಾಥ್ ಅಭಿನಯದ ‘ಅವಳೇ ನನ್ನ ಹೆಂಡ್ತಿ’ ಚಿತ್ರದ ನಿರ್ದೇಶಕ ಎಸ್. ಉಮೇಶ್ ನಿಧನ: ಚಿತ್ರರಂಗದಲ್ಲಿ ಅತೀವ ಶೋಕ!

ಬೆಂಗಳೂರು: ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ಉಮೇಶ್ (S. Umesh) ಅವರು ತೀವ್ರ ಅನಾರೋಗ್ಯದ ಕಾರಣ ಇಂದು ನಿಧನರಾಗಿದ್ದಾರೆ. ಅವರು ಕಳೆದ ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಶ್ವಾಸಕೋಶದಲ್ಲಿ ನೀರು ತುಂಬಿದ ಪರಿಣಾಮ, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಉಮೇಶ್ ಅವರು
ಎಸ್. ಉಮೇಶ್ (S. Umesh) ಅವರು ಡಿ.ರಾಜೇಂದ್ರ ಬಾಬು. ಜೋಸೈಮನ್ , ಮುಂತಾದ ನಿರ್ದೇಶಕರ ಜೊತೆಗೆ ನಿರ್ದೇಶನ ಮಾಡಿದ್ದ ಇವರು ಸಂಕಲನಕಾರರೂ ಆಗಿದ್ದವರು. ನಿರ್ಮಾಪಕ ಕೆ.ಪ್ರಭಾಕರ್ ಅವರೊಂದಿಗೆ ಸೇರಿ ‘ಅವಳೆ ನನ್ನ ಹೆಂಡ್ತಿ’ ‘ಅವನೇ ನನ್ನ ಗಂಡ’ ‘ನನಗೂ ಹೆಂಡ್ತಿ ಬೇಕು’, ‘ರಾಜ ಕೆಂಪು ರೋಜಾ’, ‘ತುಂಬಿದ ಮನೆ’, ‘ಎಲ್ಲರಂಥಲ್ಲ ನನ್ನ ಗಂಡ’, ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಅವರ (S. Umesh) ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಬನಶಂಕರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಯೊಳಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ಲಭಿಸಿದೆ.
ಚಿತ್ರರಂಗಕ್ಕೆ ಅವರು ಕೊಟ್ಟ ಕೊಡುಗೆ ಅಮೂಲ್ಯ. ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ.
Que Prachara
🚀 ನಿಮ್ಮ ಬ್ರ್ಯಾಂಡ್ ಗೆ ಡಿಜಿಟಲ್ ಬೂಸ್ಟ್ ನೀಡಿ! Que Prachara ಜೊತೆ ನಿಮ್ಮ ವ್ಯವಹಾರವನ್ನು ಮತ್ತಷ್ಟು ಬೆಳೆಸಿಕೊಳ್ಳಿ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ! 👉 Que Prachara
Gaurish Akki Studio
🎥 ಅಪ್ರತಿಮ ಕಥೆಗಳ ಮಂತ್ರ! ವೈಶಿಷ್ಟ್ಯಪೂರ್ಣ ಸಂದರ್ಶನಗಳು, ಆಕರ್ಷಕ ಡಾಕ್ಯುಮೆಂಟರಿಗಳು, ಮತ್ತು ಆಳವಾದ ಚರ್ಚೆಗಳಿಗೆ Gaurish Akki Studio ಗೆ ಭೇಟಿ ನೀಡಿ. ಸಬ್ ಸ್ಕ್ರೈಬ್ ಮಾಡಿ! 👉 Gaurish Akki Studio
Alma Media School
📢 ನಿಮ್ಮ ಮಾಧ್ಯಮ ಆಸಕ್ತಿಯನ್ನು ವೃತ್ತಿಯಾಗಿ ಮಾರ್ಪಡಿಸಿ! ಪ್ರಾಯೋಗಿಕ ಪತ್ರಿಕೋದ್ಯಮ ಮತ್ತು ಮಾಧ್ಯಮ ತರಬೇತಿಗಾಗಿ Alma Media School ಗೆ ಸೇರಿ. ಇಂದುಲೇ ನೋಂದಾಯಿಸಿ! 👉 Alma Media School
Akey News
📰 ನಿಖರ ಮತ್ತು ನಿಷ್ಪಕ್ಷಪಾತ ಸುದ್ದಿಗಳು! ವಿಶ್ವಾಸಾರ್ಹ ಹಾಗೂ ಆಳವಾದ ಸುದ್ದಿಗಾಗಿ Akey News ನೋಡಿ. ಇನ್ನೂ ಹೆಚ್ಚು ಓದಿ! 👉 Akey News