
ನವದೆಹಲಿ: 2024ರ ಲೋಕಸಭಾ ಚುನಾವಣೆ ಸುಗಮವಾಗಿ ನಡೆಯಲು ತಯಾರಿ ನಡೆಸುತ್ತಿರುವ ರಾಷ್ಟ್ರೀಯ ಚುನಾವಣಾ ಆಯೋಗ, ಅಂಗವಿಕಲರು ಮತ್ತು ವೃದ್ಧರಿಗೆ ಮತದಾನ ಮಾಡಲು ಒಂದು ಅಪ್ಲಿಕೇಶನ್ ಸೌಲಭ್ಯ ಕಲ್ಪಿಸಿದೆ. ಈ ಅಪ್ಲಿಕೇಶನ್ ಹೆಸರೇ ‘ಸಕ್ಷಮ್’.
ಮತದಾನ ಮಾಡುವುದರಿಂದ ವೃದ್ದರು ಹಾಗೂ ಅಂಗವಿಕಲರು ವಂಚಿತರಾಗಬಾರದು ಎಂಬ ಕಾರಣದಿಂದಾಗಿ, ಮನೆಯಲ್ಲಿಯೇ ಕುಳಿತು ‘ಸಕ್ಷಮ್ ಅಪ್ಲಿಕೇಶನ್’ ಮೂಲಕ ತಾವು ಇಚ್ಚಿಸಿದ ಅಭ್ಯರ್ಥಿಗೆ ಮತ ನೀಡುವ ಸೌಲಭ್ಯವನ್ನು ರಾಷ್ಟ್ರೀಯ ಚುನಾವಣಾ ಆಯೋಗ ನೀಡಿದೆ.
85 ವರ್ಷ ಮೀರಿದ ವೃದ್ಧರಿಗೆ ಹಾಗೂ ಶೇಕಡ 40 ಕ್ಕಿಂತ ಹೆಚ್ಚು ಮಾನದಂಡವನ್ನು ಹೊಂದಿದ ಅಂಗವಿಕಲರಿಗೆ ಈ ಸೌಲಭ್ಯ ದೊರಕಲಿದೆ. ಮತಗಟ್ಟೆಗೆ ಬಂದು ಮತದಾನ ಮಾಡುವ ಇತರೆ ಅಂಗವಿಕಲರು ಹಾಗೂ ವೃದ್ಧರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಮತದಾನದ ಬೋರ್ಡ್ ತಿಳಿಸಿದೆ.