“ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು”: ನವೆಂಬರ್ 21ರಂದು ಬಿಡುಗಡೆಯಾಗಲಿದೆ ಲಿರಿಕಲ್ ವೀಡಿಯೋ..!
ಬೆಂಗಳೂರು: ಪ್ರತಿಷ್ಠಿತ ಇಂಚಗೇರಿ ಮಠದ ಶ್ರೀಕ್ಷೇತ್ರದಲ್ಲಿ, “ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಿತ್ರದ ಲಿರಿಕಲ್ ವಿಡಿಯೋ ನವೆಂಬರ್ 21 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಶ್ರೀಮಠದ ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು, ಶ್ರೀ ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೆಯ ಅಂಗವಾಗಿ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಿನಿಮಾದ ಹಾಡುಗಳು ಇಂಚಗೇರಿ ಆಧ್ಯಾತ್ಮಿಕ ಪರಂಪರೆಯ ಸ್ಫೂರ್ತಿಯಿಂದ ಸಜ್ಜಾಗಿದ್ದು, ಹಾಡಿನ ಗಾಯಕ ರವೀಂದ್ರ ಸೊರಗಾವಿ ಅವರು ಆಧ್ಯಾತ್ಮಿಕತೆಯನ್ನು ಕೊಂಡಾಡುವ “ಗುರುಲಿಂಗ ಜಂಗಮ ಮಹಾರಾಜ” ಹಾಡಿನ ಮೂಲಕ ತಮ್ಮ ಪ್ರಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಇಂಚಗೇರಿಯ ಆಧ್ಯಾತ್ಮಿಕ ಸಂಕೇತವನ್ನು ಸೆರೆಹಿಡಿಯುವಂತೆ ಈ ಚಿತ್ರವನ್ನು ನಿರ್ದೇಶಕ ರಾಜಾ ರವಿಶಂಕರ್ ರೂಪಿಸಿದ್ದಾರೆ.
ಸಿನಿಮಾ ನಿರ್ಮಾಪಕರಾದ ಮಾಧವಾನಂದ ವೈ, ಶ್ರೀಶೈಲ ಗಾಣಿಗೇರ ಸೇರಿದಂತೆ ಚಿತ್ರತಂಡದ ಸದಸ್ಯರು ಇಂಚಗೇರಿಯಲ್ಲಿ ಶ್ರೀಗಳು ನೀಡಿದ ಆಶೀರ್ವಾದ ಪಡೆದು ಧರ್ಮಸ್ಥಳದ ಶ್ರೀಮಂಜನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಚಿತ್ರತಂಡದೊಂದಿಗೆ ಹಿರಿಯ ನಟರು ಹಾಗೂ ಹೊಸ ಪ್ರತಿಭೆಗಳು ಸೇರಿದ್ದು, ಈ ಚಿತ್ರಕ್ಕೆ ಚಂದದ ತಾರಾಬಳಗವಿದೆ.