CinemaEntertainment
ತುಮಕೂರಿನಲ್ಲಿ ಸಂಪರ್ಕ ಸಂಗಮ 2024: ಮುಖ್ಯ ಭಾಷಣಕಾರರಾಗಿ ಗೌರೀಶ್ ಅಕ್ಕಿ.

ಗುಬ್ಬಿ: ಇಂದು ಆಗಸ್ಟ್ 21ರಂದು, ಕೇಬಲ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನಾಚರಣೆಯ ಪ್ರಯುಕ್ತ ತುಮಕೂರಿನ ಜಿಲ್ಲಾ ಕೇಬಲ್ ಟಿ.ವಿ ಆಪರೇಟರ್ಸ್ ಮತ್ತು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಅಸೋಸಿಯೇಷನ್ ಅವರು ಸಂಪರ್ಕ ಸಂಗಮ 2024 ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕನ್ನಡ ಪತ್ರಿಕೋದ್ಯಮ ಜಗತ್ತಿನ ಖ್ಯಾತ ಪತ್ರಕರ್ತರು, ನಿರೂಪಕರು, ನಟ ಹಾಗೂ ನಿರ್ದೇಶಕರು, ಅದೇ ರೀತಿ ಬಿಗ್ ಬಾಸ್ ಹತ್ತನೇ ಆವೃತ್ತಿಯ ಸ್ಪರ್ಧಿಗಳು ಆದಂತಹ ಗೌರೀಶ್ ಅಕ್ಕಿ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ.

90ರ ದಶಕದಲ್ಲಿ ಭಾರತದ ಮೂಲೆ ಮೂಲೆಗೂ ಹಬ್ಬಿಕೊಂಡಿದ್ದ ಕೇಬಲ್ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು, ಅದೇ ರೀತಿ ಕೇಬಲ್ ಆಪರೇಟರ್ಸ್‌ಗಳಿಗೆ ಎದುರಾಗುವ ಸಂಕಷ್ಟಗಳನ್ನು ಎದುರಿಸಲು ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡಲಿವೆ.