ಸ್ಯಾಂಡಲ್ ವುಡ್ ಕಪ್-2024ರ ಜೆರ್ಸಿ ಬಿಡುಗಡೆ: ಪಂದ್ಯಾವಳಿ ಹಿಂದಿರುವ ದೊಡ್ಡ ಉದ್ದೇಶ ಏನು ಗೊತ್ತೇ..?!
ಬೆಂಗಳೂರು: ಕನ್ನಡ ಚಿತ್ರರಂಗದ ತಾರೆಯರನ್ನು ಒಟ್ಟುಗೂಡಿಸುವ ಅತ್ಯಂತ ಕುತೂಹಲಕಾರಿ ಸ್ಯಾಂಡಲ್ ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಜೆರ್ಸಿ ಬಿಡುಗಡೆ ಸಮಾರಂಭ ಬೆಂಗಳೂರಿನ ಬನಶಂಕರಿಯ ಖಾಸಗಿ ಕ್ಲಬ್‌ನಲ್ಲಿ ನಡೆದಿತು. ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಟೂರ್ನಮೆಂಟ್‌ನ ಅಧಿಕೃತ ಜೆರ್ಸಿಯನ್ನು ಅನಾವರಣ ಮಾಡಿ, ಎಲ್ಲ ತಂಡಗಳಿಗೆ ಶುಭಕೋರಿದರು.
ಪಂದ್ಯಾವಳಿಯಲ್ಲಿ ಮಿಂಚಿಲಿರುವವರು ಯಾರು?
ಈ ಟೂರ್ನಮೆಂಟ್‌ನಲ್ಲಿ ಕನ್ನಡ ಚಲನಚಿತ್ರ ತಾರೆಯರು, ಕಿರುತೆರೆ ನಟರು, ಮಾಧ್ಯಮದವರು ಮತ್ತು ಚಿತ್ರರಂಗದ ತಂತ್ರಜ್ಞರು ಭಾಗವಹಿಸುತ್ತಿದ್ದಾರೆ. ಸೆಪ್ಟೆಂಬರ್ 28-29 ರಂದು ನಡೆಯಲಿರುವ ಈ ಪಂದ್ಯಾವಳಿಯು ಮನರಂಜನೆಯೊಂದಿಗೆ, ಚಿತ್ರರಂಗದ ಕಲಾವಿದರಿಗೆ ಆರ್ಥಿಕ ಸಹಾಯ ನೀಡುವ ಮಹತ್ತರ ಧ್ಯೇಯವನ್ನು ಹೊಂದಿದೆ.
ಕಿಚ್ಚ ಸುದೀಪ್ ಅವರ ಹೇಳಿಕೆ:
“ನಮ್ಮ ಚಿತ್ರರಂಗದ ತಾರೆಯರು ಮತ್ತು ತಂತ್ರಜ್ಞರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ ಎಂದರೆ, ಅದು ತುಂಬಾ ಸಂತೋಷದ ವಿಚಾರ. ಕನ್ನಡ ಚಿತ್ರರಂಗದ ಬಗ್ಗೆ ಸಾರ್ವಜನಿಕರಿಗೆ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದೇವೆ,” ಎಂದು ಸುದೀಪ್ ತಮ್ಮ ಭಾಷಣದಲ್ಲಿ ಹೇಳಿದರು.
ಕಲಾವಿದರು ಹಾಗೂ ತಂಡಗಳು:
ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಪ್ರಮುಖ ತಂಡಗಳು ಮತ್ತು ಆಟಗಾರರ ಹೆಸರುಗಳು ಕೂಡ ಪ್ರಕಟವಾಗಿದ್ದು, ತಾರೆಯರನ್ನು ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಟೂರ್ನಮೆಂಟ್‌ನ ನಾಯಕರು ಮತ್ತು ಉಪನಾಯಕರು ತಮ್ಮ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಜ್ಜಾಗಿದ್ದಾರೆ.
ಸ್ಯಾಂಡಲ್ ವುಡ್ ಕಪ್-2024 ಟೂರ್ನಮೆಂಟ್‌ನ್ನು ಏರ್ಪಡಿಸಿರುವುದು ಕೇವಲ ಕ್ರೀಡಾಕೂಟ ಮಾತ್ರವಲ್ಲ, ಕನ್ನಡ ಚಿತ್ರರಂಗದ ತಂತ್ರಜ್ಞರು ಮತ್ತು ಕಲಾವಿದರು ತೊಂದರೆಗಳಲ್ಲಿ ಇರುವಾಗ ಅವರಿಗೆ ನೆರವು ಒದಗಿಸುವ ಉದ್ದೇಶವನ್ನು ಈ ಪಂದ್ಯಾವಳಿ ಹೊಂದಿದೆ.