ಸ್ಯಾಂಡಲ್‌ವುಡ್ ದಂಧೆಗೆ ಬಿತ್ತು ಭಾರೀ ಗೂಸಾ: ₹1 ಕೋಟಿ ಮೌಲ್ಯದ ಚಂದನದ ಕಂಬಗಳು ಪೋಲಿಸ್ ವಶ!

ಬೆಂಗಳೂರು: ಹೊಸ್ಕೋಟೆ ತಾಲ್ಲೂಕಿನ ತಿರುಮಲಶೆಟ್ಟಿಹಳ್ಳಿಯ ಪೊಲೀಸರು, ಆಂಧ್ರ ಪ್ರದೇಶದ ಪೊಲೀಸರ ಮಾಹಿತಿ ಮೇರೆಗೆ, ಕಡಿವಾಣವಿಲ್ಲದ ರೆಡ್ ಸ್ಯಾಂಡಲ್‌ವುಡ್ ಕಳ್ಳಸಾಗಣೆಗೆ ಭಾರಿ ಹೊಡೆತ ನೀಡಿದ್ದಾರೆ. ಹೊಸ್ಕೋಟೆ ತಾಲೂಕಿನ ಕಟ್ಟಿಗೇನಹಳ್ಳಿಯಲ್ಲಿ ನಿಲಗಿರಿ ಕಾಡಿನೊಳಗೆ ಗುಪ್ತವಾಗಿ ಅಡಗಿಸಿಟ್ಟಿದ್ದ 180 ಚಂದನ ಕಂಬಗಳನ್ನು ವಶಪಡಿಸಿಕೊಂಡಿದ್ದಾರೆ. ಅಂದಾಜು ₹1 ಕೋಟಿ ಮೌಲ್ಯದ ಈ ಕಂಬಗಳನ್ನು ಅಕ್ರಮವಾಗಿ ಸಾಗಿಸಲು ಸ್ಮಗ್ಲರ್‌ಗಳು ಯೋಜನೆ ಹಾಕಿಕೊಂಡಿದ್ದರು.
ಆಂಧ್ರ ಪೊಲೀಸರ ‘ಟಾಪ್ ಸೀಕ್ರೆಟ್’ ಕಾರ್ಯಾಚರಣೆ!
ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಯವರ ಪ್ರಕಾರ, ಈ ಕಾರ್ಯಾಚರಣೆಗೆ ಮೂಲ ಕಾರಣ ಆಂಧ್ರ ಪ್ರದೇಶ ಪೊಲೀಸರು. ಆಂಧ್ರದಲ್ಲಿ ಸ್ಮಗ್ಲರ್‌ಗಳನ್ನು ಬಂಧಿಸಿದ ನಂತರ, ಅವರ ವಿಚಾರಣೆಯಲ್ಲಿ ಕಟ್ಟಿಗೇನಹಳ್ಳಿಯಲ್ಲಿರುವ ಅಡಗು ತಾಣ ಬಯಲಿಗೆ ಬಂದಿತ್ತು. ಆಂಧ್ರ ಪೊಲೀಸರು ಈ ಗುಪ್ತ ಸ್ಥಳದ ಮಾಹಿತಿ ಶೋಧಿಸಿ, ಕರ್ನಾಟಕ ಪೊಲೀಸರ ಸಹಕಾರದಿಂದ ಕಂಬಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ತೂರಿನಲ್ಲಿ 7 ಟನ್ ಅಕ್ರಮ ಸಾಗಣೆ – ₹4.5 ಕೋಟಿ ಮೌಲ್ಯದ ದಂಧೆ ಬಯಲು!
ಇದೇ ಸಮಯದಲ್ಲಿ, ಆಂಧ್ರ ಪ್ರದೇಶದ ತಿರುಪತಿ ರೆಡ್ ಸ್ಯಾಂಡರ್ಸ್ ಆಂಟಿ-ಸ್ಮಗ್ಲಿಂಗ್ ಟಾಸ್ಕ್ ಫೋರ್ಸ್ ದೊಡ್ಡ ಕಾರ್ಯಾಚರಣೆಯೊಂದನ್ನು ನಡೆಸಿ, ಅಂತರರಾಜ್ಯ ದಂಧೆಕೋರರ ಜಾಲವನ್ನು ಭೇದಿಸಿದೆ. ಜನವರಿ 22ರಂದು ಚಿತ್ತೂರಿನ ಬಳಿ ನಡೆದ ತಪಾಸಣೆಯಲ್ಲಿ, ₹4.5 ಕೋಟಿ ಮೌಲ್ಯದ ರೆಡ್ ಸ್ಯಾಂಡಲ್‌ವುಡ್ ವಶಪಡಿಸಿಕೊಳ್ಳಲಾಗಿದೆ.
ಸ್ಮಗ್ಲರ್‌ಗಳು 7 ಟನ್ ರೆಡ್ ಸ್ಯಾಂಡಲ್‌ವುಡ್‌ನನ್ನು ಕಂಟೇನರ್ ಲಾರಿಯಲ್ಲಿ ಅಡಗಿಸಿ ಸಾಗಿಸುತ್ತಿದ್ದರು. ಈ ಮರದ ಲೂಟಿಯು ಆಸ್ಸಾಂವರೆಗೆ ಸಾಗಿಸುವುದರ ಜೊತೆಗೆ, ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುವ ಯತ್ನ ಮಾಡಲಾಗುತ್ತಿತ್ತು.
ಆಂಧ್ರ ಪ್ರದೇಶ – ಅಕ್ರಮ ದಂಧೆಯ ಗೂಡು?
ರೆಡ್ ಸ್ಯಾಂಡಲ್‌ವುಡ್ ದಂಧೆಯ ಮೂಲವೆಂದರೆ ಆಂಧ್ರ ಪ್ರದೇಶದ ತಿರುಪತಿ. ಚೀನಾ, ಜಪಾನ್ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಬೇಡಿಕೆಯಿರುವುದರಿಂದ, ದಂಧೆ ಜಾಲವು ಅತೀವ ಚುರುಕುಗೊಂಡಿದೆ. ಇದನ್ನು ಪಾಪ್ ಕಲ್ಚರ್‌ನಲ್ಲಿ ಹೀರೋಯಿಸಂ ಆಗಿ ತೋರಿಸಲಾಗಿದ್ದರೂ, ಹಿಂಸಾಚಾರ, ಅಕ್ರಮ ಹಣಕಾಸು, ಅಂತರರಾಷ್ಟ್ರೀಯ ಮಾರ್ಕೆಟ್ ಸಂಪರ್ಕಗಳ ಹಿನ್ನಲೆಯಲ್ಲಿ ಇದು ಭಾರೀ ತಲೆನೋವಾಗಿ ಪರಿಣಮಿಸಿದೆ.