ಸ್ಯಾಂಡಲ್‌ವುಡ್ ಮದುವೆ ಸಂಭ್ರಮ: ಸಾಲು ಸಾಲು ಶಾದಿ, ಅರಮನೆ ಮೈದಾನ ಸಿಂಗಾರ!

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಈಗ ಮದುವೆಯ ಸಂಚಲನ! ತಾರೆಯರ ಮನೆಯಲ್ಲಿ ಹಬ್ಬದ ವಾತಾವರಣ, ಆರತಕ್ಷತೆಗೂ ಮುನ್ನವೇ ಹಳದಿ ಶಾಸ್ತ್ರಗಳ ಅದ್ಧೂರಿ ಆಚರಣೆ! ಸಿನಿ ತಾರೆಯರು, ರಾಜಕೀಯ ಗಣ್ಯರು, ವಿ.ಐ.ಪಿ ಅತಿಥಿಗಳು ಸೇರಿದಂತೆ ದೊಡ್ಡ ಮಟ್ಟದ ಸಂಭ್ರಮಕ್ಕೆ ಕಣ್ಣಾರೆ ಸಾಕ್ಷಿಯಾಗಲು ಬೆಂಗಳೂರಿನ ಅರಮನೆ ಮೈದಾನ ಸಜ್ಜಾಗಿದೆ.
ಡಾಲಿ ಧನಂಜಯ್ ಮದುವೆ – ಫೆಬ್ರವರಿ 16, ಸಪ್ತಪದಿ!
ಡಾಲಿ ಸ್ಟಾರ್ ಧನಂಜಯ್ ಈ ಫೆಬ್ರವರಿ 16 ರಂದು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಮದುವೆ ಭರ್ಜರಿ ಬ್ರಹ್ಮಾಂಡವಾಗಿ ನಡೆಯಲಿದ್ದು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಭಾಗಿಯಾಗಲಿದ್ದಾರೆ.
ಸೌಂದರ್ಯ – ರುಷಬ್ ಮದುವೆ: ಅರಮನೆ ಮೈದಾನದಲ್ಲಿ ಅದ್ಧೂರಿ ಸಂಭ್ರಮ!
ಹಿರಿಯ ನಟಿ ಜಯಮಾಲಾ ಅವರ ಮಗಳು ಸೌಂದರ್ಯ ಹೊಸ ಬದುಕಿಗೆ ಮುನ್ನುಡಿ ಬರೆಯಲು ರೆಡಿಯಾಗಿದ್ದಾರೆ. ರುಷಬ್ ಕೆ. ಪೊಲೀಸ್ ಮಹಾ ನಿರ್ದೇಶಕ ಕೆ.ರಾಮಚಂದ್ರ ರಾವ್ ಅವರ ಪುತ್ರನನ್ನು ವರಿಸಲು ಸೌಂದರ್ಯ ಸಜ್ಜಾಗಿದ್ದು, ಮದುವೆ ಅದ್ಧೂರಿಯಾಗಿ ಅರಮನೆ ಮೈದಾನದಲ್ಲಿ ನಡೆಯಲಿದೆ.
ಹಳದಿ ಶಾಸ್ತ್ರದಲ್ಲಿ ಗ್ಲಾಮರ್ ಡೋಸ್!
ಲಲಿತ್ ಅಶೋಕ್ ಹೊಟೇಲ್ ನಲ್ಲಿ ನಡೆದ ಹಳದಿ ಶಾಸ್ತ್ರದಲ್ಲಿ ಸ್ಯಾಂಡಲ್‌ವುಡ್ ನಟಿಯರು ಮಿಂಚಿದ್ದಾರೆ. ಸುಧಾರಾಣಿ, ಮಾಳವಿಕಾ ಅವಿನಾಶ್, ಶ್ರುತಿ, ಪ್ರಿಯಾಂಕ ಉಪೇಂದ್ರ, ಅನು ಪ್ರಭಾಕರ್ ಸೇರಿ ಅನೇಕ ತಾರೆಯರು ಹಳದಿ ಬಣ್ಣದ ಉಡುಗೆಯಲ್ಲಿ ಮಿಂಚಿದರು.
ರಕ್ಷಿತಾ ಪ್ರೇಮ್ ಸೋದರ ರಾಣಾ ಮದುವೆ: ಜೈಲಿನಿಂದ ಬಂದ ದರ್ಶನ್ ಹಾಜರಾಗ್ತಾರಾ?
ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ತಮ್ಮ ಸೋದರ ರಾಣಾ ಅವರ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಮದುವೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ನಟ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ದೊಡ್ಡ ಗಣ್ಯರು ಭಾಗಿಯಾಗಲಿದ್ದಾರೆ. ವಿಶೇಷ ಅಂದ್ರೆ, ಕೇಸ್ ವಿಚಾರದಲ್ಲಿ ಜೈಲಿನಿಂದ ಬಿಡುಗಡೆಯಾದ ನಟ ದರ್ಶನ್ ಕೂಡಾ ಈ ಮದುವೆಗೆ ಹಾಜರಾಗಬಹುದೇ? ಎಂಬ ಕುತೂಹಲವಿದೆ!
ಮದುವೆಗೆ 5000+ ಗಣ್ಯರಿಗೆ ಆಹ್ವಾನ!
ಸ್ಯಾಂಡಲ್‌ವುಡ್ ಮತ್ತು ರಾಜಕೀಯ ಕ್ಷೇತ್ರದ ಹಲವು ಪ್ರಮುಖರು, ಬೃಹತ್ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅರಮನೆ ಮೈದಾನ ಈಗಾಗಲೇ ಅಲಂಕರಿಸೋಕೆ ಸಜ್ಜಾಗಿದೆ!