BengaluruEntertainment
“ದರ್ಶನ್ ಸರ್ ಸಲುವಾಗಿ ಪ್ರಾರ್ಥನೆ ಮಾಡುತ್ತೇನೆ.” – ಸಂಜನಾ.
ಬೆಂಗಳೂರು: ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾಣಿ ದರ್ಶನ್ ಕೊಲೆ ಪ್ರಕರಣದ ಕುರಿತಂತೆ ತಮ್ಮ ಮೊದಲ ರಿಯಾಕ್ಷನ್ ನೀಡಿದ್ದಾರೆ. ಗಲ್ರಾಣಿ ಅವರು ದರ್ಶನ್ ಅವರು ಬಂಧನವಾದ ಸುದ್ದಿಯನ್ನು ಕೇಳಿ ಗಾಭರಿ ಆಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ ನಲ್ಲಿ ಹೇಳಿದ್ದಾರೆ.
“ಈ ಒಂದು ಸುದ್ದಿಯನ್ನು ನ್ಯೂಸ್ ನಲ್ಲಿ ನೋಡಿತ್ತಿದ್ದೇನೆ, ಅದರಿಂದ ನನಗೆ ತುಂಬಾ ಶಾಕ್ ಆಗಿದೆ. ದೇವರಲ್ಲಿ ನಾನು ಕೂತು ಪ್ರಾರ್ಥನೆ ಮಾಡುತ್ತೇನೆ. ದರ್ಶನ್ ಸರ್ ಗೆ ಬರೀ ವಿಚಾರಣೆಗೆ ಆಗಿರಲಿ. ದಯವಿಟ್ಟು ಅವರು ಅರೆಸ್ಟ್ ಆಗಬಾರದು ಎಂದು ನಾನು ದೇವರಲ್ಲಿ ಕೂತು ಕೇಳಿಕೊಳ್ಳುತ್ತೇನೆ.” ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ದರ್ಶನ್ ಅವರ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೆಯೇ, ಕನ್ನಡದ ನಟ ನಟಿಯರು ಈ ಘಟನೆಯ ಕುರಿತು ತಮ್ಮ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದಾರೆ.