ಬಿಜೆಪಿ ಸೇರಿದ ದೇಶದ ಅತ್ಯಂತ ಶ್ರೀಮಂತ ಮಹಿಳೆ.
ಚಂಡೀಗಢ: ಭಾರತದ ಶ್ರೀಮಂತ ಮಹಿಳೆ ಹಾಗೂ ಹರಿಯಾಣದ ಮಾಜಿ ಶಾಸಕಿ ಶ್ರೀಮತಿ. ಸಾವಿತ್ರಿ ಜಿಂದಾಲ್ ಅವರು ಗುರುವಾರ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಕಾಲಿಟ್ಟಿದ್ದಾರೆ.
ಶ್ರೀಮತಿ ಜಿಂದಾಲ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ, ” ಹಿಸ್ಸಾರ್ ಕ್ಷೇತ್ರದ ಜನರು ನನ್ನ ಕುಟುಂಬ ಇದ್ದಂತೆ, ನನ್ನ ಕುಟುಂಬದವರ ಸಲಹೆ ಮೇರೆಗೆ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.” ಎಂದು ಹೇಳಿಕೊಂಡಿದ್ದಾರೆ.
84 ವರ್ಷದ ಸಾವಿತ್ರಿ ಜಿಂದಾಲ್ ಅವರು, ಸ್ಟೀಲ್ ಹಾಗೂ ಪವರ್ ಕ್ಷೇತ್ರಗಳ ಸಂಘಟಿತ ಸಂಸ್ಥೆಯಾದ ಜಿಂದಾಲ್ ಗ್ರೂಪ್‌ನ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಮಾರ್ಚ್ 3.2024ರ ಪ್ರಕಾರ ಇವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಅಷ್ಟೇ ಇಲ್ಲದೆ ಶ್ರೀಮತಿ ಜಿಂದಾಲ್ ಅವರು ಜಗತ್ತಿನ 50 ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
ಇವರ ಮಗನಾದ ನವೀನ್ ಜಿಂದಾಲ್ ಅವರು ಕೂಡ ರವಿವಾರ ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿದ್ದಾರೆ. ಇವರು ಹತ್ತು ವರ್ಷಗಳ ಕಾಲ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿ ಕಾರ್ಯ ನಿರ್ವಹಿಸಿದ್ದರು.