Finance

SEBI ಹೊಸ ಪ್ರಯತ್ನ: ಮ್ಯೂಚುವಲ್ ಫಂಡ್ ಹಳೆಯ ಹೂಡಿಕೆಗಳನ್ನು ಹುಡುಕಲು ಹೊಸ ವೇದಿಕೆ..!

ಮುಂಬೈ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಮಂಗಳವಾರ ಮ್ಯೂಚುವಲ್ ಫಂಡ್ ಹೂಡಿಕೆದಾರರ ಮರೆತುಹೋದ ಫೋಲಿಯೊಗಳನ್ನು (inactive/unclaimed folios) ಹುಡುಕಲು MITR (Mutual Fund Investment Tracing and Retrieval Assistant) ಎಂಬ ಹೊಸ ಸೇವಾ ವೇದಿಕೆಯನ್ನು ಪ್ರಸ್ತಾಪಿಸಿದೆ.

ಏನು ಈ MITR?
SEBI ಪ್ರಕಾರ, ಈ MITR ವೇದಿಕೆಯನ್ನು Registrar and Transfer Agents (RTAs) ಅಭಿವೃದ್ಧಿಪಡಿಸಲಿದ್ದು, ಹೂಡಿಕೆದಾರರು ತಮ್ಮ ಮರೆತ ಹೂಡಿಕೆಗಳನ್ನು ಹುಡುಕಲು ಸುಲಭಗೊಳಿಸಲಿದೆ. ಜೊತೆಗೆ, KYC ನವೀಕರಣ, ಮೋಸ ಪತ್ತೆಗೊಳ್ಳುವಿಕೆ ತಡೆಯಲು ಮತ್ತು ಪಾರದರ್ಶಕ ಹಣಕಾಸು ವ್ಯವಸ್ಥೆ ನಿರ್ಮಿಸಲು ಸಹಾಯ ಮಾಡಲಿದೆ.

ಹೂಡಿಕೆ ಕಳೆದುಹೋಗಿದ್ದರ ಗುಟ್ಟು!
ಹಿಂದಿನ ದಿನಗಳಲ್ಲಿ ಕಾಗದಗಳಲ್ಲಿ ಹೂಡಿಕೆ ಮಾಡಿದವರ KYC ಮಾಹಿತಿಯಿಲ್ಲದ ಕಾರಣ, ಹಲವರು ತಮ್ಮ ಹೂಡಿಕೆಗಳನ್ನು ಮರೆತು ಬಿಡುತ್ತಾರೆ. ಹೂಡಿಕೆದಾರರು ಅಥವಾ ಅವರ ವಾರಸುದಾರರು Asset Management Companies (AMCs) ಸಂಪರ್ಕಿಸದಿದ್ದರೆ, ಆ ಹಣ ಸದ್ದಿಲ್ಲದೆ ಉಳಿಯುತ್ತದೆ. ಇದರಿಂದಾಗಿ ಹಳೆಯ inactive folios ಮೋಸದ ಪರಿಣಾಮಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು SEBI ಎಚ್ಚರಿಕೆ ನೀಡಿದೆ.

MITR-ನಿಂದ ಹೂಡಿಕೆದಾರರಿಗೆ ಉಪಯೋಗವೇನು?

  • ಹಳೇ ಫೋಲಿಯೊಗಳನ್ನು ಪತ್ತೆ ಮಾಡಬಹುದು.
  • ಮೋಸದ ಭೀತಿಯನ್ನು ಕಡಿಮೆ ಮಾಡುತ್ತದೆ.
  • KYC ನವೀಕರಣ ಮೂಲಕ ಹೂಡಿಕೆ ದಾರರ ಮಾಹಿತಿ ದೃಡೀಕರಣ.
  • MF Central, AMFI ಮತ್ತು AMCs ವೆಬ್‌ಸೈಟ್‌ಗಳ ಮೂಲಕ MITR ನ ಸೇವೆಗೆ ಪ್ರವೇಶ ದೊರೆಯಲಿದೆ.

RTAs–CAMs & KFin Technologies
ಈ ಸೇವಾ ವೇದಿಕೆಯನ್ನು CAMS ಮತ್ತು KFin Technologies ಎಂಬ Qualified RTAs ಜಂಟಿಯಾಗಿ AMCs‌ ಗಾಗಿ ಏಜೆಂಟ್‌ಗಳಂತೆ ನಿರ್ವಹಿಸಲಿವೆ. ವೇದಿಕೆಯ ಸೈಬರ್ ಸೆಕ್ಯುರಿಟಿ, ಡಿಸಾಸ್ಟರ್ ರಿಕವರಿ (DR) ಹಾಗೂ ಬಿಸಿನೆಸ್ ಕಂಟಿನ್ಯುಟಿ ಪ್ಲಾನ್ (BCP) ನಿಯಮಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು SEBI ಸ್ಪಷ್ಟಪಡಿಸಿದೆ.

ಹೂಡಿಕೆದಾರರಿಗೆ ಜಾಗೃತಿ!
ನಿಮ್ಮ ಹೂಡಿಕೆ ಮರೆತು ಹೋಗದಂತೆ ಈ ಹೊಸ MITR ವೇದಿಕೆ ಅತ್ಯುತ್ತಮ ಪರಿಹಾರ ನೀಡಲಿದೆ. SEBI ನೀಡಿರುವ ಈ ಪ್ರಸ್ತಾಪದ ಬಗ್ಗೆ ಸಾರ್ವಜನಿಕರು ಜನವರಿ 7ರವರೆಗೆ ಅಭಿಪ್ರಾಯ ಸಲ್ಲಿಸಬಹುದಾಗಿದೆ.

Show More

Leave a Reply

Your email address will not be published. Required fields are marked *

Related Articles

Back to top button