India
‘ಸೆನ್ಸೆಕ್ಸ್ ಬೂಮ್’: ಶೇರು ಮಾರುಕಟ್ಟೆ ಹಸಿರು ಓಟ.

ಮುಂಬೈ: ಇಂದು ಭಾರತೀಯ ಶೇರು ಮಾರುಕಟ್ಟೆ ಹಚ್ಚ ಹಸಿರಾಗಿ ಕಂಗೊಳಿಸುತ್ತಿದೆ. ಸೆನ್ಸೆಕ್ಸ್ ಅಚ್ಚರಿಯ ಜಿಗಿತ ಕಂಡಿದೆ. ಈ ಬೆಳವಣಿಗೆಗೆ ಎಕ್ಸಿಟ್ ಪೋಲ್ ಫಲಿತಾಂಶವೇ ಕಾರಣ ಎಂಬುದು ಕೆಲವರ ನಂಬಿಕೆ. ಚುನಾವಣೆಗೂ ಹಾಗೂ ಶೇರು ಮಾರುಕಟ್ಟೆಗೂ ನಂಟಿದೆಯೇ?
ಈ ರೀತಿಯ ಅಚ್ಚರಿಯ ಜಿಗಿತ 2014ರಲ್ಲಿ ಮೋದಿಯವರು ಮೊದಲ ಬಾರಿಗೆ ಪ್ರಧಾನಿ ಆದಾಗಲೂ ಕಂಡುಬಂದಿತ್ತು. 2014ರ ಚುನಾವಣಾ ಫಲಿತಾಂಶ ಬಂದ ದಿನ ಸೆನ್ಸೆಕ್ಸ್ ತನ್ನ ಸಾಮಾನ್ಯ ಗಡಿ ದಾಟಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಅದೇ ರೀತಿ ಇಂದು ಸಹ ಭಾರತೀಯ ಶೇರು ಬಜಾರ್ ಹಸಿರು ಬಣ್ಣದಿಂದ ಕೂಡಿದೆ. ಸೆನ್ಸೆಕ್ಸ್ 75,000ದ ಗಡಿ ದಾಟಿದೆ.
ಶೇರು ಮಾರುಕಟ್ಟೆ ಹಾಗೂ ಚುನಾವಣೆಯ ಕುರಿತು ಅಮಿತ್ ಷಾ ಅವರು ಒಂದು ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. “ಶೇರು ಮಾರುಕಟ್ಟೆ ಪ್ರಕ್ರಿಯೆ ವರ್ಷದಲ್ಲಿ ಮೂರು ನಾಲ್ಕು ಬಾರಿ ಏರಿಕೆ ಕಾಣುತ್ತದೆ. ಶೇರು ಮಾರುಕಟ್ಟೆ ಹಾಗೂ ಚುನಾವಣೆಗೆ ಯಾವುದೇ ಸಂಬಂಧವಿಲ್ಲ.” ಎಂದು ಹೇಳಿದ್ದಾರೆ.