ಲೈಂಗಿಕ ಕಿರುಕುಳ ಪ್ರಕರಣ: ಅಮಾಯಕ ಹೆಣ್ಣಿನ ಮೇಲೆ ಎರಗಿತೇ ‘ಹಿಂದೂ ಹುಲಿ’ ಅರುಣ್ ಕುಮಾರ್ ಪುತ್ತಿಲ..?!
ಬೆಂಗಳೂರು: ಕರ್ನಾಟಕದ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪದ ಪ್ರಕರಣ ದಾಖಲಾಗಿದ್ದು, ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 1ರಂದು ಎಫ್ಐಆರ್ ದಾಖಲಾಗಿದೆ. 47 ವರ್ಷ ವಯಸ್ಸಿನ ಮಹಿಳೆ ನೀಡಿದ ದೂರಿನ ಪ್ರಕಾರ, 2023ರ ಜೂನ್ ತಿಂಗಳಲ್ಲಿ ಬೆಂಗಳೂರಿನ ಹೋಟೆಲ್‌ನಲ್ಲಿ ಅರುಣ್ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದಾರೆ.
ಆಕ್ಷೇಪಣೆ: ಮಹಿಳೆಯೊಬ್ಬರ ಹೇಳಿಕೆಯ ಆಧಾರ.
ಮಹಿಳೆ ಹೇಳಿಕೆಯ ಪ್ರಕಾರ, ಅರುಣ್ ಅವರ ಹಿಂದೂತ್ವದ ಸಿದ್ಧಾಂತಗಳನ್ನು ಮೆಚ್ಚಿಕೊಂಡು, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಬೆಂಬಲ ನೀಡುತ್ತಿದ್ದೆ. ಆದರೆ, ಜೂನ್ 2023ರಲ್ಲಿ ಅರುಣ್ ಅವರ ಬಲವಂತದ ಆಹ್ವಾನದ ಮೇರೆಗೆ ಅವರು ಬೆಂಗಳೂರಿನ ಹೋಟೆಲ್‌ಗೆ ಹೋದಾಗ, ಲೈಂಗಿಕ ದೌರ್ಜನ್ಯ ಮಾಡಿದರು ಎಂದು ದೂರಿದ್ದಾರೆ. ಅಲ್ಲದೇ, ಅವರು ಮಹಿಳೆಯ ಫೋಟೋ, ಸೆಲ್ಫಿ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಬ್ಲಾಕ್‌ಮೇಲ್ ಮಾಡಿದ್ದು, ಹಣ ಮತ್ತು ಕೆಲಸದ ಭರವಸೆಗಳ ಮೂಲಕ ಮಾನಸಿಕ ಮತ್ತು ದೈಹಿಕ ಶೋಷಣೆ ನಡೆಸಿದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಅರುಣ್ ಪುತ್ತಿಲ ಪ್ರತಿಕ್ರಿಯೆ:
ಅರುಣ್ ಪುತ್ತಿಲ ಅವರು ಈ ಆರೋಪಗಳನ್ನು ತಳ್ಳಿ ಹಾಕಿದ್ದು, “ಈ ಆರೋಪಗಳು ಪೂರ್ವನಿಯೋಜಿತವಾದವು, ನನ್ನನ್ನು ಕೆಡವಲು ಮಾಡಲಾಗಿದೆ. ನನಗೆ ಆ ಮಹಿಳೆ ಪರಿಚಯವೇ ಇಲ್ಲ” ಎಂದು ಸ್ಪಷ್ಟಪಡಿಸಿದರು. ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 417, 354A, ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅರುಣ್ ಕುಮಾರ್ ಪುತ್ತಿಲ 2023 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರಿನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಮತ್ತು ನಂತರ ಬಿಜೆಪಿ ಸೇರಿದ್ದರು.