Blog

ಇಂದಿನ ಶೇರು ಮಾರುಕಟ್ಟೆ – 08/02/2024

ಶೇರು ಮಾರುಕಟ್ಟೆ ಗುರುವಾರದಂದು ಇಳಿಕೆ ಕಂಡಿದೆ‌. ಇಂದು ಭಾರತೀಯ ಕೇಂದ್ರ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರಿಪೋ ರೇಟನ್ನು ಬಹಿರಂಗ ಪಡಿಸಿದ್ದು, ಸತತ ಆರನೇ ಬಾರಿಯೂ ಶೇ.6.5 ದರದಲ್ಲಿಯೇ ಮುಂದುವರೆಯಲಿದೆ. ಈ ನಿರ್ಣಯದ ಪರಿಣಾಮ ಎಂಬಂತೆ ಇಂದು ಖ್ಯಾತ ಖಾಸಗಿ ಬ್ಯಾಂಕುಗಳು ತಮ್ಮ ಶೇರಿನ ಮೌಲ್ಯ ಕಳೆದುಕೊಂಡಿದೆ. ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ 3% ಕಳೆತ ಕಂಡಿದೆ.

07/02/2024 ರಂದು

  • ನಿಫ್ಟಿ-50 – 21,717.35 (212.55 ಅಂಕ ಇಳಿಕೆ)
  • ನಿಫ್ಟಿ ಬ್ಯಾಂಕ್ – 45,012 (806 ಅಂಕ ಇಳಿಕೆ)
  • ಸೆನ್ಸೆಕ್ಸ್ – 71,428.43 (723.57 ಅಂಕ ಇಳಿಕೆ)

ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಏರಿಕೆ –

  • SBIN (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) – 3.64% ಏರಿಕೆ.
  • BPCL (ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್)- 3.35% ಏರಿಕೆ.
  • POWERGRID (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್)- 3% ಏರಿಕೆ.

ಇಳಿಕೆ –

  • KOTAKBANK (ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ )- 3.49% ಇಳಿಕೆ.
  • BRITANNIA ( ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್)- 3.16% ಇಳಿಕೆ.
  • AXISBANK (ಆಕ್ಸಿಸ್ ಬ್ಯಾಂಕ್ ಲಿಮಿಟೆಡ್)- 3.01% ಇಳಿಕೆ.

ಇಂದಿನ ಚಿನ್ನದ ದರ ಹೀಗಿದೆ.

  • 22 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ ₹6058 ಆಗಿದೆ. ಇಂದು ₹28 ದರ ಕಡಿಮೆಯಾಗಿದೆ.
  • 24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ ₹6609 ಆಗಿದೆ. ಇಂದು ₹31.11 ದರ ಕಡಿಮೆಯಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ.

  • ಇಂದು ಡಾಲರ್ ಎದುರು ರೂಪಾಯಿ 0.02% ನಷ್ಟು ಕಡಿತ ಹೊಂದಿ, ₹82.9775 ರಷ್ಟಕ್ಕೆ ಬಂದು ನಿಂತಿದೆ.
Show More

Related Articles

Leave a Reply

Your email address will not be published. Required fields are marked *

Back to top button