ಇಂದು ಶೇರು ಮಾರುಕಟ್ಟೆಯಲ್ಲಿ ನಿಪ್ಟಿಯು ದಿನಾಂತ್ಯದ ವೇಳೆಗೆ ಕೇವಲ 1 ಅಂಕ ಗಳಿಸಲಷ್ಟೇ ಶಕ್ತವಾಗಿದೆ. ದೈನಂದಿನ ಚಾರ್ಟ್ ನಲ್ಲಿ ನಕಾರಾತ್ಮಕ ಸೂಚನೆ ಕಂಡು ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮಾನಿಟರಿ ಪಾಲಿಸಿಯನ್ನು ಘೋಷಿಸಲು ಇನ್ನೂ ಮೂರು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಯಾವರೀತಿ ಬದಲಾಗಲಿದೆ ಎಂಬುದು ಗಮನಾರ್ಹ ಪ್ರಶ್ನೆಯಾಗಿದೆ.
07/02/2024 ರಂದು
- ನಿಫ್ಟಿ-50 – 21,930.50 (1.10 ಅಂಕ ಏರಿಕೆ)
- ನಿಫ್ಟಿ ಬ್ಯಾಂಕ್ – 45,818.50 (127.7 ಅಂಕ ಏರಿಕೆ)
- ಸೆನ್ಸೆಕ್ಸ್ – 72,152.0 (34.09 ಅಂಕ ಇಳಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಏರಿಕೆ –
- SBIN (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) – 4.19% ಏರಿಕೆ.
- GRSIM (ಗ್ರಾಸಿಮ್ ಇಂಡಸ್ಟ್ರಿ ಲಿಮಿಟೆಡ್)- 2.38% ಏರಿಕೆ.
- HDFCLIFE (ಎಚ್ಡಿಏಫ್ಸಿ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್)- 2.24% ಏರಿಕೆ.
ಇಳಿಕೆ –
- TECHM (ಟೆಕ್ ಮಹೀಂದ್ರಾ ಲಿಮಿಟೆಡ್)- 2.67% ಇಳಿಕೆ.
- POWERGRID ( ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್)- 2.50% ಇಳಿಕೆ.
- INFY (ಇನ್ಪೋಸಿಸ್ ಲಿಮಿಟೆಡ್)- 1.99% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ ₹5800 ಆಗಿದೆ. ಇಂದು ₹25 ದರ ಹೆಚ್ಚಳವಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ ₹6323 ಆಗಿದೆ. ಇಂದು ₹23 ದರ ಹೆಚ್ಚಳವಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ 0.09% ನಷ್ಟು ಕಡಿತ ಹೊಂದಿ, ₹82.9975 ರಷ್ಟಕ್ಕೆ ಬಂದು ನಿಂತಿದೆ.