BengaluruPolitics

ಶಿರೂರು ಗುಡ್ಡ ಕುಸಿತ: ರಾಜ್ಯ ಸರ್ಕಾರದ ವಿಳಂಬಕ್ಕೆ ಬಿ.ವೈ. ವಿಜಯೇಂದ್ರ ಟೀಕೆ.

ಬೆಂಗಳೂರು: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಶಿರೂರು ಗುಡ್ಡ ಕುಸಿತದ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿಯ ವಿರುದ್ಧ ಹರಿಹಾಯ್ದಿದ್ದಾರೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ, ರಾಜ್ಯವು ಪ್ರವಾಹವನ್ನು ಎದುರಿಸುವ ಸಂದರ್ಭ ಬಂದಾಗ, ಅಂದಿನ ಸರ್ಕಾರ ಹೇಗೆ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿತು ಎಂದು ಕಾಂಗ್ರೆಸ್ ಪಕ್ಷಕ್ಕೆ ಪಾಠ ಮಾಡಿದ್ದಾರೆ.

“ನಿರಂತರ ಸುರಿಯುತ್ತಿರುವ ರಣಮಳೆಯಿಂದ ರಾಜ್ಯದ ಹಲವೆಡೆಗಳಲ್ಲಿ ಗುಡ್ಡಗಳು ಕುಸಿಯುತ್ತಿವೆ, ಕೆರೆ-ಕಟ್ಟೆಗಳು ಒಡೆದು ಸಾವು ನೋವುಗಳು ಸಂಭವಿಸುತ್ತಿವೆ, ಅನೇಕ ಕಡೆಗಳಲ್ಲಿ ಜನ ತಮ್ಮ ಮನೆ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಿರಾಶ್ರಿತರಾಗಿರುವ ಸಂಕಷ್ಟಿತ ಜನರ ನೆರವಿಗೆ ಸರ್ಕಾರ ಸ್ಪಂದಿಸುತ್ತಿರುವ ರೀತಿ ಸಮಾಧಾನಕರ ಹಾದಿಯಲ್ಲಿ ಸಾಗುತ್ತಿಲ್ಲ.

ಈ ಹಿಂದಿನ ಬಿಜೆಪಿ ಸರ್ಕಾರದ (2020ರ) ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿ ಮಾನ್ಯ
ಬಿ.ಎಸ್. ಯಡಿಯೂರಪ್ಪನವರು ಏಕಾಂಗಿಯಾಗಿ ನಿಂತು ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು.

ನೆರೆ ಹಾವಳಿಯಿಂದ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದ ಜನರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪಗಳಿಗೆ ನಿಗದಿಯಾಗಿದ್ದ ಪರಿಹಾರದ ಮೊತ್ತದ ಮಿತಿಯನ್ನು ಬದಿಗೆ ಸರಿಸಿ ಆಶ್ರಯವಿಲ್ಲದೆ ಪರಿತಪಿಸುತ್ತಿದ್ದ ಸಂತ್ರಸ್ಥ ಜನರಿಗೆ ತುರ್ತಾಗಿ ಮನೆ ಪುನರ್ ನಿರ್ಮಿಸಿಕೊಳ್ಳಲು 1 ಲಕ್ಷದ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಏರಿಸಿ ಜಖಂಗೊಂಡ ಮನೆಗಳಿಗೆ 40 ಸಾವಿರದಿಂದ ಒಂದು ಲಕ್ಷ ರೂಪಾಯಿ ಗಳಿಗೆ ಏರಿಸಿ ಪರಿಹಾರವನ್ನು ವಿತರಿಸಿದ್ದರು, ಹಾಗೆಯೇ ಸಂತ್ರಸ್ತರಿಗೆ ತಕ್ಷಣವೇ ರೂಪಾಯಿ 10,000 ನೀಡಿ, ಸಂತ್ರಸ್ತರು ಹೊಸ ಮನೆ ಕಟ್ಟಿಕೊಳ್ಳುವವರೆಗೆ ಮಾಸಿಕ 5,000 ರೂ. ಬಾಡಿಗೆ ನೀಡಲು ಆದೇಶಿಸಿದ್ದರು.

ರಾಜ್ಯ ಸರ್ಕಾರ ಇದೇ ಮಾದರಿಯಲ್ಲಿ ಹೆಚ್ಚಿನ ಪರಿಹಾರವನ್ನು ಸದ್ಯ ಸಂಕಷ್ಟಿತರಿಗೆ ತತ್ ಕ್ಷಣದಲ್ಲಿ ವಿತರಿಸಿ ಸಾವು ನೋವುಗಳ ನಡುವೆ ಅಸಹನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಜನರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸುತ್ತೇನೆ.” ಎಂದು ಹೇಳಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಒಂದು ವಾರದ ನಂತರ ರಾಜ್ಯದ ಮುಖ್ಯಮಂತ್ರಿ ಧಾವಿಸುತ್ತಾರೆ ಎಂದರೆ ಅವರಿಗೆ ಎಷ್ಟು ಜನರ ಬಗ್ಗೆ ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ. ಸಂತ್ರಸ್ತರನ್ನು ಸರಿಯಾಗಿ ಭೇಟಿ ಮಾಡಿದೆ, ಕೇವಲ ಮಾಧ್ಯಮಗಳಿಗೆ ಉತ್ತರಿಸಲು ಬಂದ ಹಾಗೆ ಇತ್ತು ಸಿಎಂ ಅವರ ಶಿರೂರು ಭೇಟಿ ಎಂಬುದು ಸ್ಥಳಿಯರ ಅನಿಸಿಕೆ.

Show More

Leave a Reply

Your email address will not be published. Required fields are marked *

Related Articles

Back to top button