ಶಿವಣ್ಣ @61
ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಇಂದು ತಮ್ಮ 61ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದಾ ಕ್ರಿಯಾಶೀಲತೆಯಿಂದ ಕೂಡಿರುವ ಇವರಿಗೆ ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ಅನಿಸುತ್ತದೆ. ತಮ್ಮ 61ನೇ ವಯಸ್ಸಿನಲ್ಲಿ, 16ನೇ ವಯಸ್ಸಿನ ಹುರುಪನ್ನು ಹೊಂದಿರುವ ಶಿವಣ್ಣನಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ವರ್ಷಗಳು ಉರುಳಿದಂತೆ ಶಿವಣ್ಣನವರ ಬೇಡಿಕೆ ಪರಭಾಷೆಯಲ್ಲಿಯೂ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ಸದ್ಯವಷ್ಟೇ ಬಿಡುಗಡೆಗೊಂಡ ತಮಿಳು ಚಿತ್ರಗಳಾದ ‘ಜೈಲರ್’ ಹಾಗೂ ‘ಮಿಲ್ಲರ್’ ಚಿತ್ರಗಳು. ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರಗಳು ಈಗಾಗಲೇ ಚಿತ್ರೀಕರಣಗೊಳ್ಳುತ್ತಿದ್ದು ಸದ್ಯದಲ್ಲೇ ತೆರೆಯ ಮೇಲೆ ಬರುವ ಸಾಧ್ಯತೆಗಳಿವೆ. ಅವುಗಳಲ್ಲಿ ಕೆಲವೆಂದರೆ, ನೀ ಸಿಗೋವರೆಗೂ, ಭೈರತಿ ರಣಗಲ್, ಫಾರ್ಟಿಫೈವ್, ಭೈರವನ ಕೊನೆ ಪಾಠ, ಅಶ್ವತ್ಥಾಮ, RDX, ಉತ್ತರಕಾಂಡ, ಎಸ್ ಆರ್ ಕೆ.
ಕೆಲವು ದಿನಗಳ ಹಿಂದೆ ಸಪ್ತ ಸಾವಿರದ ಆಚೆಯಲ್ಲೋ ಚಿತ್ರದ ಮೂಲಕ ದೇಶದ ಗಮನ ಸೆಳೆದಿದ್ದ, ಕನ್ನಡದ ಕ್ಯಾತ ನಿರ್ದೇಶಕ ಹೇಮಂತ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ, ‘ಭೈರವನ ಕೊನೆ ಪಾಠ’ ಚಿತ್ರದ ಮೊದಲ ಲುಕ್ ಹೊರಬಂದಿದ್ದು, ಅದರಲ್ಲಿ ಶಿವಣ್ಣನವರ ಹೊಸ ನೋಟ, ಭಾರೀ ಕುತೂಹಲ ಮೂಡಿಸಿದೆ. ಈ ಜನ್ಮದಿನದಂದು ಅವರಿಗೆ ದೇವರು ಆಯುಷ್ಯ, ಆರೋಗ್ಯ ನೀಡಲಿ. ಶಿವಣ್ಣನವರು ಇನ್ನಷ್ಟು ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಲಿ ಎಂದು ಆಶಿಸುತ್ತೇವೆ.