ಬೆಚ್ಚಿಬಿದ್ದ ಬೆಂಗಳೂರು: ಪ್ರಿಯತಮನಿಗಾಗಿ ತಾಯಿಯನ್ನೇ ಹತ್ಯೆ ಮಾಡಿದ ಮಹಿಳೆ..?!
ಬೆಂಗಳೂರು: 29 ವರ್ಷದ ಪವಿತ್ರ ಸುರೇಶ್ ಮತ್ತು 20 ವರ್ಷದ ಪ್ರೇಮಿ ಲವ್ಲೀಶ್ ಅವರನ್ನು ಬೆಂಗಳೂರಿನ ಪೋಲಿಸ್ ಬಂಧಿಸಿದೆ. ಈ ಪ್ರಕರಣವು ನಗರವನ್ನು ಬೆಚ್ಚಿಬೀಳಿಸಿದೆ. ಆರೋಪಿಗಳು ಪವಿತ್ರ ಅವರ ತಾಯಿ ಜಯಲಕ್ಷ್ಮಿ ಅವರನ್ನು ಕೊಂದು, ಅದನ್ನು ಒಂದು ಅಪಘಾತ ಎಂದು ತೋರಿಸಲು ಉಪಾಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರದಂದು, ಪವಿತ್ರ ಅವರ ತಾಯಿ ಜಯಲಕ್ಷ್ಮಿ ಬಾತ್ರೂಮಿನಲ್ಲಿ ಬಿದ್ದು ಅಸ್ವಸ್ಥರಾಗಿದ್ದಾರೆಂದು ಬೊಮ್ಮನಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಪವಿತ್ರ ಹೇಳಿಕೆ ಪ್ರಕಾರ, ಅವರು ತಮ್ಮ ತಾಯಿಯನ್ನು ಬೆಡ್ ಮೇಲೆ ಕರೆತಂದು ಮಲಗಿಸಿದ್ದರು. ಆದರೆ, ಎರಡು ದಿನಗಳ ನಂತರ ಪೋಸ್ಟ್ಮಾರ್ಟಂ ವರದಿ ಬಂದಾಗ ವಿಚಿತ್ರ ಸತ್ಯ ಹೊರಬಂದಿತು.
ಪೋಸ್ಟ್ಮಾರ್ಟಂ ವರದಿ ಪ್ರಕಾರ, ಜಯಲಕ್ಷ್ಮಿ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಪವಿತ್ರ ಸತ್ಯ ಹೊರಹಾಕಿದ್ದಾರೆ. ಪವಿತ್ರಾಳ ಪ್ರೇಮ ಸಂಬಂಧವನ್ನು ತಾಯಿ ಜಯಲಕ್ಷ್ಮಿ ನಿರಾಕರಿಸಿದ್ದೇ ಈ ಭಯಾನಕ ಅಪರಾಧಕ್ಕೆ ಕಾರಣವಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪವಿತ್ರ ಅವರು 11 ವರ್ಷಗಳ ಹಿಂದಿನಿಂದ ವಿವಾಹಿತರಾಗಿದ್ದು, ಇಬ್ಬರು ಮಕ್ಕಳನ್ನೂ ಹೊಂದಿದ್ದಾರೆ. ಪ್ರತಿ ದಿನ ಪ್ರಾವಿಶನಲ್ ಸ್ಟೋರ್ ಅನ್ನು ನಿರ್ವಹಿಸುತ್ತಿದ್ದರು. ಲವ್ಲೀಶ್ ಎಂಬ ಕಾರ್ ಡ್ರೈವರ್, ಜಯಲಕ್ಷ್ಮಿ ಅವರಿಂದ ಬಾಡಿಗೆ ಕೋಣೆ ಪಡೆದು ಇದ್ದ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಪವಿತ್ರ ಅವರೊಂದಿಗೆ ಪ್ರಣಯಕ್ಕೆ ಇಳಿದಿದ್ದ. ಆದರೆ ಈ ಪ್ರೇಮಕ್ಕೆ ಮುಳ್ಳಾಗಿ ಬಂದ ಜಯಲಕ್ಷ್ಮಿ ಅವರನ್ನು ಬುಡಸಮೇತ ಕಿತ್ತು ಹಾಕಿದ್ದು ಮಗಳು ಪವಿತ್ರ ಎಂಬುದೇ ಆಘಾತಕಾರಿ ಸುದ್ದಿ.