BengaluruFinance

ಆನ್‌ಲೈನ್ ಫುಡ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಹೆಚ್ಚಾಯ್ತು ಜೊಮ್ಯಾಟೋ ಫ್ಲಾಟ್‌ಫಾರ್ಮ್ ಶುಲ್ಕ!

ಬೆಂಗಳೂರು: ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಜೊಮ್ಯಾಟೋ, ಮುಂಬರುವ ಹಬ್ಬಗಳ ಒತ್ತಡವನ್ನು ಎದುರಿಸಲು ಫ್ಲಾಟ್‌ಫಾರ್ಮ್ ಶುಲ್ಕವನ್ನು ₹7ರಿಂದ ₹10ಕ್ಕೆ ಹೆಚ್ಚಿಸಿದೆ. ಜೊಮ್ಯಾಟೋ ಆಪ್‌ನಲ್ಲಿ ಪ್ರಕಟಣೆ ಮಾಡಿದ್ದು, “ಈ ಶುಲ್ಕದಿಂದ ನಮ್ಮ ವಿತ್ತೀಯ ನಿರ್ವಹಣೆ ಸಾದ್ಯವಾಗುತ್ತದೆ ಮತ್ತು ಹಬ್ಬದ ಕಾಲದಲ್ಲಿ ಉತ್ತಮ ಸೇವೆಯನ್ನು ನಿಭಾಯಿಸಲು ಇದನ್ನು ಸ್ವಲ್ಪ ಹೆಚ್ಚಿಸಲಾಗಿದೆ” ಎಂದು ತಿಳಿಸಿದೆ.

ಅಗಸ್ಟ್ 2023ರಲ್ಲಿ ₹2 ಶುಲ್ಕವನ್ನು ಪರಿಚಯಿಸಿದ ಜೊಮ್ಯಾಟೋ, ಅದನ್ನು ಕ್ರಮೇಣ ₹3 ಮತ್ತು ನಂತರ ಜ.1, 2024 ರಂದು ₹4ಕ್ಕೆ ವೃದ್ಧಿ ಮಾಡಿತ್ತು. ಈಗ ಹಬ್ಬದ ಹಿನ್ನಲೆಯಲ್ಲಿ, ಮತ್ತೆ ₹10ಕ್ಕೆ ಏರಿಕೆ ಮಾಡಲಾಗಿದೆ.

ಜೊಮ್ಯಾಟೋ ಹೂಡಿಕೆಯ ವರದಿ:
ಜೊಮ್ಯಾಟೋ ತನ್ನ ಸೆಪ್ಟೆಂಬರ್ 30, 2024 ರಲ್ಲಿ ಕೊನೆಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟು ₹176 ಕೋಟಿಯ ಲಾಭವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ₹36 ಕೋಟಿ ಲಾಭವನ್ನು ಕಂಡಿದ್ದ ಜೊಮ್ಯಾಟೋ, ಈ ವರ್ಷ ₹4,799 ಕೋಟಿ ಒಟ್ಟು ಆದಾಯವನ್ನು ಗಳಿಸಿದೆ. ಹೋಲಿಸಿ ನೋಡಿದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ₹2,848 ಕೋಟಿ ಆದಾಯ ಹೊಂದಿತ್ತು.

ಈ ಅವಧಿಯಲ್ಲಿ ಒಟ್ಟು ವೆಚ್ಚವು ₹4,783 ಕೋಟಿಗೆ ಏರಿಕೆಯಾಗಿದೆ, ಹಳೆಯ ದಾಖಲೆ ₹3,039 ಕೋಟಿ.

ಬೋರ್ಡ್ ನಿರ್ಧಾರ:
ಜೊಮ್ಯಾಟೋ ಸಂಸ್ಥೆಯ ಬೋರ್ಡ್ ₹8,500 ಕೋಟಿ ಗಳಿಸಲು ಸೂಕ್ತ ಸಾಂಸ್ಥಿಕ ಹಂಚಿಕೆ ಮೂಲಕ ಹೂಡಿಕೆ ದಾರಿ ತೆರೆಯಲು ಒಪ್ಪಿಗೆ ನೀಡಿದೆ.

Show More

Leave a Reply

Your email address will not be published. Required fields are marked *

Related Articles

Back to top button