CinemaEntertainment
ಶಾಕಿಂಗ್ ಸುದ್ದಿ: ಉದಯ ಟಿವಿ ಮುಖ್ಯಸ್ಥರಾದ ಸೆಲ್ವಂ ಅವರು ಹೃದಯಾಘಾತದಿಂದ ನಿಧನ..!

ಬೆಂಗಳೂರು: ಜನಪ್ರಿಯ ಉದಯ ಟಿವಿ ಮುಖ್ಯಸ್ಥರಾದ ಸೆಲ್ವಂ ಅವರು ಇಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು 84 ವರ್ಷ ವಯಸ್ಸಿನವರಾಗಿದ್ದು, ಕಳೆದ ಕೆಲವು ದಿನಗಳಿಂದ ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎನ್ನಲಾಗಿದೆ. ಕುಟುಂಬದ ಮೂಲಗಳ ಪ್ರಕಾರ, ಅಂತ್ಯಕ್ರಿಯೆ ನಾಳೆ ಚೆನ್ನೈನಲ್ಲಿ ನೆರವೇರಲಿದೆ.
ಉದಯ ಟಿವಿ ಭಾರತೀಯ ಮಾಧ್ಯಮ ಲೋಕದಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದು, ಸೆಲ್ವಂ ಅವರ ನಾಯಕತ್ವದಲ್ಲಿ ಈ ವಾಹಿನಿಯು ಅಪಾರ ಜನಪ್ರಿಯತೆ ಪಡೆದುಕೊಂಡಿತ್ತು. ಟಿವಿ ಉದ್ಯಮದಲ್ಲಿ ಅವರ ಕೊಡುಗೆ ಹಾಗೂ ಶ್ರದ್ಧೆಗೆ ಎಲ್ಲಾ ಗಣ್ಯರು ಕಂಬನಿ ಮಿಡಿದಿದ್ದಾರೆ.