ಮಾಯನ್ಪುರಿ: ಉತ್ತರ ಪ್ರದೇಶದ ಮಾಯನ್ಪುರಿಯಲ್ಲಿ ಮನು ಸಾಗರ್ ಎಂಬಾತ ಗರ್ಭಿಣಿ ಆಡಿನ ಮೇಲೆ ಅತ್ಯಾಚಾರ ನಡೆಸಿ, ಆಮೇಲೆ ಅದನ್ನು ಕೊಲೆ ಮಾಡಿರುವುದಾಗಿ ಮಾದ್ಯಮಗಳು ವರದಿ ಮಾಡಿದೆ. ಈ ಘಟನೆ ಕೋಟ್ವಾಲಿ ಠಾಣಾ ವ್ಯಾಪ್ತಿಯ ಆಜಾದ್ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಡು ಮಾಲೀಕ ಶೇರ್ ಸಿಂಗ್, ಈ ಕುರಿತ ದೂರು ದಾಖಲಿಸಿದ್ದರಿಂದ ಪೊಲೀಸರು ಮನು ಸಾಗರ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಘಟನೆ ವಿವರ:
ಮನು ಸಾಗರ್, ಯು.ಪಿ.ನ ಮಾಯನ್ಪುರಿಯ ನಿವಾಸಿ, ಮೂಲತಃ ಇ-ರಿಕ್ಷಾ ಚಾಲಕನಾಗಿದ್ದು, ಘಟನೆ ನಡೆದಾಗ ಮಾದಕ ಪದಾರ್ಥಗಳ ಪ್ರಭಾವದಲ್ಲಿದ್ದ ಎನ್ನಲಾಗಿದೆ. ಶೇರ್ ಸಿಂಗ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಮೃತ ಆಡಿನ ಮೇಲೆ ಅತ್ಯಾಚಾರ ಆಗಿರುವ ಕುರಿತು ವೈದ್ಯಕೀಯ ಪರೀಕ್ಷೆಗೆ ಮಾಡಲಾಗುತ್ತಿದೆ. ಈ ಆಡು ಮೂರು ತಿಂಗಳ ಗರ್ಭಿಣಿಯಾಗಿದ್ದು, ಈ ಘಟನೆಯಿಂದ ಆಡಿನ ಮಾಲೀಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹಿಂದಿನ ಆರೋಪಗಳು:
ಮನು ಸಾಗರ್‌ನ ಕಳೆದ ಅಪರಾಧಗಳ ಹಿನ್ನೆಲೆಯು ಕೂಡ ಭಯಾನಕವಾಗಿದೆ. ತಾಯಿ ಮೇಲೆಯೇ ಅತ್ಯಾಚಾರ ನಡೆಸಿರುವ ಆರೋಪಕ್ಕೆ ಒಳಗಾಗಿದ್ದ ಈ ಪಾಪಿ. ಹಲವು ಕಾಲುಗಳಿಂದ ಇವನ ಪತ್ನಿ ಮತ್ತು ಕುಟುಂಬಸ್ಥರು ಇವನಿಂದ ದೂರವೇ ಉಳಿಯುತ್ತಿದ್ದಾರೆ. ತಾಯಿ ಮತ್ತು ಅಂಧ ತಂದೆ ಆಶ್ರಮದಲ್ಲಿ ಜೀವನ ನಡೆಸುತ್ತಿದ್ದಾರೆ.