ಉತ್ತರ ಕನ್ನಡ: ಜಿಲ್ಲೆಯ ಶಿರಸಿ ನಗರ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಜಾತ್ರೆಯ ಸೊಗಡು ತುಂಬಿರುವ ನಗರಕ್ಕೆ ದೇಶದ ಮೂಲೆ ಮೂಲೆಯಿಂದ ಭಕ್ತರು ಬರುತ್ತಿದ್ದಾರೆ. ಇದು ಶಿರಸಿಯ ಮಾರಿಕಾಂಬಾ ಜಾತ್ರೆ. ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ.
ಮಾರ್ಚ್ 19 ರಿಂದ ಪ್ರಾರಂಭವಾಗಿ ಮಾರ್ಚ್ 27ರ ತನಕ ಮಾರಿ ಜಾತ್ರೆ ನಡೆಯಲಿದೆ. ದೇವಿ ಜಾತ್ರೆಯ ಪ್ರಾರಂಭದಲ್ಲಿ ಪ್ರತೀತಿಯಂತೆ ನಿನ್ನೆ ಮಂಗಳವಾರ ರಾತ್ರಿ 11.39ರ ವೇಳೆಗೆ ನವ ವಧುವಾಗಿ ಸಿಂಗಾರಗೊಂಡ ಶ್ರೀ ಮಾರಿಕಾಂಬೆಯ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಿತು.
ಮಾರಿಕಾಂಬಾ ದೇವಿಯ ತವರು ಮನೆಯವರು ಎಂದೇ ಗುರುತಿಸಲಾದ ನಾಡಿಗ ಮನೆತನದ ವಿಜಯ ನಾಡಿಗರವರು ದೇವಿಯ ಕಲ್ಯಾಣ ಮಹೋತ್ಸವವನ್ನು ನೆರವೇರಿಸಿದರು.