Alma Corner

ಸುಮಾರು 2 ವರ್ಷಗಳಾದರೂ ನಿಲ್ಲದ ರಷ್ಯಾ-ಯುಕ್ರೈನ್ ಸಮರ…!

ಯುಕ್ರೇನ್ ದೇಶ ಅಮೇರಿಕಾ ಒದಗಿಸಿದ ಕ್ಷಿಪಣಿಗಳನ್ನು ಬಳಸಿಕೊಂಡು ಶುಕ್ರವಾರ ಮತ್ತೆ ರಷ್ಯಾದ ಕುರ್ಸ್ಕ್ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 6 ಜನರು ಮೃತಪಟ್ಟಿದ್ದಾರೆ ಎಂಬುವ ಮಾಹಿತಿ ತಿಳಿದು ಬಂದಿದೆ.
ದಾಳಿಯ ನಂತರ ಕುರ್ಸ್ಕ್ ಪ್ರದೇಶದ 10 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತು ಎಂದು ಕುರ್ಸ್ಕ್ ಆಕ್ಟಿಂಗ್ ಗವರ್ನರ್ ಅಲೆಕ್ಸಾಂಡರ್ ಖೇನ್ಷ್ಟೇನ್ ಮಾಹಿತಿ ನೀಡಿದರು. ಅಮೇರಿಕಾ ಒದಗಿಸಿರುವ HIMARS ಕ್ಷಿಪಣಿಗಳ ಸಹಾಯದಿಂದ ಯುಕ್ರೇನ್ ಈ ದಾಳಿ ನಡೆಸಿದೆ. ವಾರದ ಆರಂಭದಲ್ಲಿ ಯುಕ್ರೇನ್ ರಷ್ಯಾ ಮೇಲೆ ಮತ್ತೊಂದು ದಾಳಿಯನ್ನು ನಡೆಸಿತು, ಅದಕ್ಕೆ ಪ್ರತಿಕ್ರಿಯೆವಾಗಿ ನಾವು ಕೀವ್‌ನಲ್ಲಿ (Kyiv) ದಾಳಿ ನಡೆಸಿದ್ದೇವೆ ಎಂದು ಮಾಸ್ಕೋ ಹೇಳಿಕೊಂಡಿದೆ.
HIMARS ಕ್ಷಿಪಣಿಗಳಿಗೆ ಸುಮಾರು 80 ಕಿಲೋಮೀಟರ್ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯವಿದೆ. ಶತ್ರುಗಳಿಗೆ ಈ ಕ್ಷಿಪಣಿಗಳನ್ನು ಗುರುತಿಸುವುದು ಕಷ್ಟ ಹಾಗೂ ಈ ಕ್ಷಿಪಣಿಗಳು ತಮ್ಮ ಸ್ಥಾನವನ್ನು ಬದಲಾಯಿಸಿಕೊಂಡು ವಾಯುದಾಳಿಗಳಿಂದ ತಪ್ಪಿಸಿಕೊಳ್ಳುತ್ತವೆ.


ಅಮೇರಿಕಾ ಅಧ್ಯಕ್ಷ ಜೋ ಬೈಡನ್ , ರಷ್ಯಾ ಮೇಲೆ ದಾಳಿ ಮಾಡಲು ಅಮೇರಿಕಾ ಒದಗಿಸಿದ ಕ್ಷಿಪಣಿಗಳು ಬಳಸಬಹುದು ಎಂದು ಯುಕ್ರೇನ್ ಗೆ ಅಧಿಕಾರ ನೀಡಿದರು. ರಷ್ಯಾ ತನ್ನ ಯುದ್ಧವನ್ನು ಬಲಪಡಿಸಲು ಉತ್ತರ ಕೊರಿಯಾದ ಸೈನಿಕರನ್ನು ನಿಯೋಜನೆ ಮಾಡಿತು, ಅದಕ್ಕಾಗಿ ಅಮೇರಿಕಾ, ಯುಕ್ರೇನ್ ಗೆ ಈ ಅಧಿಕಾರ ನೀಡಿದೆ ಎಂದು ಯುಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ ಕೀವ್ ನಲ್ಲಿ 3 ದೊಡ್ಡ ಮಟ್ಟದ ಸ್ಫೋಟಗಳು ಕೇಳಿಬಂದವು.
ಕೀವ್ ನಗರದ ಮೇಲೆ ದಾಳಿಯಾಗುವ, ಐದು ಶಾರ್ಟ್‌-ರೇಂಜ್ ಬ್ಯಾಲಿಸಿಟ್ಕ್ ಕ್ಷಿಪಣಿಗಳನ್ನು ತಡೆಹಿಡಿದಿದೆ ಎಂದು ಯುಕ್ರೇನ್ ನ ವಾಯುಪಡೆ ಹೇಳಿದೆ. ಈ ದಾಳಿಯಿಂದ 630 ಮನೆಗಳು, 16 ಚಿಕಿತ್ಸ ಕೇಂದ್ರಗಳು ಮತ್ತು 30 ಶಾಲೆಗಳು ಹಾನಿಯಾಗಿವೆ ಎಂದು ಕೀವ್ ನಗರ ಆಡಳಿತ ತಿಳಿಸಿದೆ. ಇದಲ್ಲದೆ, ಕ್ಷಿಪಣಿಗಳಿಂದ ಮೂರು ಪ್ರದೇಶಗಳಲ್ಲಿ ಬೆಂಕಿ ಬಿದ್ದಿದೆ.
“ಆಶ್ರಯವನ್ನು ಹುಡುಕಲು ಕಷ್ಟವಾಗುವ ಕಾರಣ, ಬ್ಯಾಲಿಸ್ಟಿಕ್ ದಾಳಿ ಬೆದರಿಕೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡಲು ನಾವು ನಾಗರಿಕರಗೆ ಹೇಳಿದ್ದೇವೆ ಎಂದು ಯುಕ್ರೇನ್ ವಾಯುಪಡೆ ಹೇಳಿದೆ.
ರಷ್ಯಾ ದಾಳಿಯಿಂದ ರಾಜಧಾನಿ ಅಲ್ಲಿ ನಡೆಯುತ್ತಿರುವ ಅಲ್ಬೇನಿಯಾ, ಅರ್ಜೆಂಟೀನಾ, ಉತ್ತರ ಮೆಸಿಡೋನಿಯಾ, ಪ್ಯಾಲೆಸ್ತೀನ್ ಮತ್ತು ಪೋರ್ಚುಗಲ್ ಅವರ diplomatic missions ಮೇಲೆ ಪರಿಣಾಮ ಬೀರಿತು ಎಂದು ಯುಕ್ರೇನ್ ವಿದೇಶಾಂಗ ಸಚಿವಾಲಯ ಹೇಳಿದೆ. ಈ ದೇಶದ ಅಧಿಕಾರಿಗಳನ್ನು ನೆಲೆಸುತ್ತಿರುವ ಕಟ್ಟಡಗಳು ರಷ್ಯಾ ದ ನೇರ ಗುರಿ ಇರಬಹುದು ಎಂದು ಅನುಮಾನ ಪಟ್ಟಿದ್ದಾರೆ. ಅದಲ್ಲದೆ , ಕೀವ್ ನ ಎರಡನೇ ಅತ್ಯಂತ ಹಳೆ ರೋಮನ್ ಕ್ಯಾಥೋಲಿಕ್ ಚರ್ಚ್ ಸೈನ್ಟ್ ನಿಕೋಲಸ್ ಕ್ಯಾಥೆಡ್ರೆಲ್ ಗೆ ಹಾನಿಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ .
ರಷ್ಯಾ ಒರೇಶ್ನಿಕ್ (Oreshnik) ಅನ್ನುವ ಕ್ಷಿಪಣಿಯನ್ನು ಬಳಸಿ ಕೀವ್ ನ ಮೇಲೆ ದಾಳಿ ಮಾಡಬಹುದು ಎಂದು ಯುಕ್ರೇನ್ನಲ್ಲಿ ಕಳವಳ ಇತ್ತು, ಇದಕ್ಕಾಗಿ ಯುಕ್ರೇನ್ ಅಧಿಕಾರಿಗಳು ತಮ್ಮ ನಾಗರಿಕರಿಗೆ ಆದಷ್ಟು ಬೇಗ ಆಶ್ರಯವನ್ನು ಹುಡುಕಿಕೊಳಲು ಏರ್ ಅಲರ್ಟ್ ನೀಡಿತ್ತು.

ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button