CinemaEntertainment
ಜೂನ್ 23ರಂದು ‘ನಿಖಾ’ ಆಗುತ್ತಿರುವ ಸೋನಾಕ್ಷಿ ಸಿನ್ಹಾ.

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತನ್ನ ಬಾಯ್‌ಫ್ರೆಂಡ್ ಜಹೀರ್ ಇಕ್ಬಾಲ್ ಅವರನ್ನು ಇದೇ ಬರುವ ಜೂನ್ 23ರಂದು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿದೆ. ಸೋನಾಕ್ಷಿ ಸಿನ್ಹಾ ಅವರು ಕೆಲವು ದಿನಗಳ ಹಿಂದೆಯಷ್ಟೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಪಶ್ಚಿಮ ಬಂಗಾಳದ ಅಸಂಸೋಲ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.
ಸೋನಾಕ್ಷಿ ಹಾಗೂ ಜಹೀರ್ ಇಬ್ಬರೂ ಸಹ ಸಲ್ಮಾನ್ ಖಾನ್ ಅವರ ಚಿತ್ರಗಳಿಂದ ತಮ್ಮ ಡೆಬ್ಯು ಮಾಡಿದ್ದಾರೆ. ಸೋನಾಕ್ಷಿ ಸಿನ್ಹಾ ಅವರು 2010ರಲ್ಲಿ ತೆರೆಕಂಡ ಸಲ್ಮಾನ್ ಖಾನ್ ಅವರ ಬ್ಲಾಕ್ಬಸ್ಟರ್ ಚಿತ್ರ ‘ದಬಂಗ್’ ನಲ್ಲಿ ನಾಯಕ ನಟಿಯಾಗಿ ಬಾಲಿವುಡ್ ಪ್ರವೇಶಿಸಿದ್ದರು. ಜಹೀರ್ ತಮ್ಮ ಮೊದಲ ಚಿತ್ರವನ್ನು ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಾಣದ ‘ನೋಟ್ಬುಕ್’ ನಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು.