ಬೆಂಗಳೂರು: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಅರ್ಜಿಗಳ ತೀರ್ಪು ಪ್ರಕಟಗೊಂಡಿದ್ದು, ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಸೌಜನ್ಯ ಹೋರಾಟಗಾರರಿಗೆ ನಿರಾಸೆ ಮೂಡಿಸಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ.ಎಂ. ಖಾಜಿ ನೇತೃತ್ವದ ಪೀಠವು ಮರು ತನಿಖೆ ನಡೆಸುವಂತೆ ಸೌಜನ್ಯ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಹೈಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು:
- ಮರು ತನಿಖೆಗೆ ಸೌಜನ್ಯ ಪೋಷಕರ ಅರ್ಜಿ ವಜಾ: ಸೌಜನ್ಯ ಪೋಷಕರು ಪ್ರಕರಣದ ಮರುತನಿಖೆಗೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
- ಸಂತೋಷ್ ರಾವ್ ಅರ್ಜಿಗೂ ನೋಟಾ: ಆರೋಪಿ ಸಂತೋಷ್ ರಾವ್ ಅಕ್ರಮ ಬಂಧನದ ಸಂಬಂಧ ಪರಿಹಾರಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಸಹ ಹೈಕೋರ್ಟ್ ತಿರಸ್ಕರಿಸಿದೆ.
- ಸೆಷನ್ಸ್ ಕೋರ್ಟ್ ತೀರ್ಪುನ್ನು ಸರಿ ಎಂದ ಹೈಕೋರ್ಟ್: ಸಂತೋಷ್ ರಾವ್ ಖುಲಾಸೆಗೊಳಿಸಿದ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಹೋರಾಟಗಾರರ ನಿರಾಶೆ:
ಸೌಜನ್ಯ ಪೋಷಕರು ಮತ್ತು ಬೆಂಬಲಿಗರು ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ಮೊದಲ ತನಿಖೆಯಲ್ಲಿ ಅನ್ಯಾಯ ಉಂಟಾಗಿರುವುದರಿಂದ ಮರುತನಿಖೆಯ ಅಗತ್ಯವಿತ್ತು ಎಂಬ ಕಾರಣಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಮೂರು ಅರ್ಜಿಗಳನ್ನೂ ವಜಾಗೊಳಿಸಿದೆ.
ಧರ್ಮಸ್ಥಳದ ವಿವಾದ ಮತ್ತು ಪ್ರಕರಣಗಳ ಪೈಕಿ ಸೌಜನ್ಯ ಕೊಲೆ ಪ್ರಮುಖವಾದದ್ದು. 428 ಅಸಹಜ ಕೊಲೆ ಪ್ರಕರಣಗಳಲ್ಲಿ ಕೇವಲ ಒಂದೇ ಒಂದು ಕೂಡ ನ್ಯಾಯಕ್ಕೆ ಹತ್ತಿರವಾಗಿಲ್ಲ. ಧರ್ಮಸ್ಥಳದ ಸೌಜನ್ಯ ಪ್ರಕರಣ, ಆನೆ ಮಾವುತನ ಕೊಲೆ, ಟೀಚರ್ ವೇದವಲ್ಲಿ ಕೊಲೆ, ಮತ್ತು ಎಸ್‌ಡಿಎಮ್ ಕಾಲೇಜು ವಿದ್ಯಾರ್ಥಿನಿ ಪದ್ಮಲತಾ ಹತ್ಯೆ ಪ್ರಕರಣಗಳು ಈ ಸಂದರ್ಭದಲ್ಲಿ ಮುಖ್ಯವಾಗಿ ಚರ್ಚೆಗೆ ಬಂದಿವೆ.
ಹೈಕೋರ್ಟ್ ತೀರ್ಪು ಕುರಿತು ಅಭಿಪ್ರಾಯ:
“ನ್ಯಾಯಾಲಯದ ತೀರ್ಪು ನಮಗೆ ಅರ್ಥವಾಗುತ್ತಿಲ್ಲ. ನಾವು ಮತ್ತೆ ಹೋರಾಟ ಮುಂದುವರಿಸುವೆವು,” ಎಂದು ಸೌಜನ್ಯ ಪೋಷಕರು ಹೇಳಿದ್ದಾರೆ. ಹೋರಾಟಗಾರರ ಪ್ರಕಾರ, “ಇದು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಹೇಯ ಕೃತ್ಯಗಳ ವಿರುದ್ಧದ ಹೋರಾಟಕ್ಕೆ ಇನ್ನೂ ಅಂತ್ಯ ನೀಡಿಲ್ಲ.” ಎಂದಿದ್ದಾರೆ.
ಸೌಜನ್ಯ ಪ್ರಕರಣ ಮತ್ತೊಮ್ಮೆ ಜನರ ಗಮನ ಸೆಳೆದಿದೆ. ಸೌಜನ್ಯ ಪರ ಹೋರಾಟಗಾರರು ಮುಂದೇನು ಮಾಡುತ್ತಾರೆ? ತೀರ್ಪಿನ ವಿರುದ್ಧ ಯಾವ ಹೆಜ್ಜೆ ಇಡಲಿದ್ದಾರೆ? ಎಂಬುದನ್ನು ಕಾದು ನೋಡಬೇಕಾಗಿದೆ.