
ಬಿಹಾಲಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮಗಳು ಸನಾ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬಸ್ ಡ್ರೈವರ್‌ನ ನಿರ್ಲಕ್ಷ್ಯ ಮತ್ತು ಅಜಾಗರೂಕತೆ ಈ ಘಟನೆಗೆ ಕಾರಣ ಎಂದು ಮಾದ್ಯಮಗಳಲ್ಲಿ ವರದಿ ಮಾಡಲಾಗಿದೆ.
ಅದೃಷ್ಟವಶಾತ್ ಸುರಕ್ಷಿತಳಾದ ಸನಾ:
ಸನಾ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಬಸ್ ಬಡಿದ ಪರಿಣಾಮ ಕಾರಿನ ಗಾಜು ಒಡೆದು ಹೋಗಿದೆ. ಆದರೆ, ಚಾಲಕನ ಸಮಯೋಚಿತ ಕ್ರಮದಿಂದ ಕಾರು ಪಲ್ಟಿಯಾಗುವ ದೊಡ್ಡ ಅಪಘಾತ ತಪ್ಪಿತು. ಬಸ್ ಡ್ರೈವರ್ ಅನ್ನು ಸ್ಥಳೀಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ಸ್:
ಈ ಘಟನೆ ಗಂಗೂಲಿ ಕುಟುಂಬದ ಮೇಲೆ ದೊಡ್ಡ ಆಘಾತ ತಂದರೂ, ಚಾಲಕನ ಎಚ್ಚರಿಕೆ ದೊಡ್ಡ ಅನಾಹುತ ತಪ್ಪಿಸಿದೆ. ಈ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದು, ಅಭಿಮಾನಿಗಳು ದಾದಾಗೆ ಧೈರ್ಯ ತುಂಬುತ್ತಿದ್ದಾರೆ.