ದಕ್ಷಿಣ ಭಾರತದ ಮೊಟ್ಟಮೊದಲ ರೋಡ್-ಕಮ್-ಮೆಟ್ರೋ ಮೇಲ್ಸೇತುವೆ ಉದ್ಘಾಟಿಸಿದ ಡಿಕೆಎಸ್.
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊಟ್ಟ ಮೊದಲ ರೋಡ್-ಕಮ್-ಮೆಟ್ರೋ ಮೇಲ್ಸೇತುವೆ ನಿರ್ಮಾಣವಾಗಿದೆ. ಈ ಮೇಲ್ಸೇತುವೆಯನ್ನು ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನೆ ಮತ್ತು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು ಆದಂತಹ ಶ್ರೀ. ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.
ಉದ್ಘಾಟಿಸಿದ ನಂತರ ಮಾತನಾಡಿದ ಡಿಕೆ ಶಿವಕುಮಾರ್ ಅವರು, “ನಾನು ಹೊಸ ಮೇಲ್ಸೇತುವೆಯ ಪ್ರಾಯೋಗಿಕ ಚಾಲನೆಗೆ ಹೋಗಲು ಬಯಸಿದ್ದೇನೆ. ಇನ್ನೂ, ಡಬಲ್ ವೇನಲ್ಲಿ ಕೆಲವು ಅಪೂರ್ಣ ಪ್ಯಾಚ್‌ಗಳಿವೆ, ಅದರ ನಂತರ ನಾವು ಔಪಚಾರಿಕ ಉದ್ಘಾಟನೆಯನ್ನು ಮಾಡುತ್ತೇವೆ ಆದರೆ ನಾವು ಈ ಮೇಲ್ಸೇತುವೆಯನ್ನು ಸಾರ್ವಜನಿಕರಿಗೆ ಬಳಸಲು ಅನುಮತಿಸುತ್ತೇವೆ…” ಎಂದು ಹೇಳಿದ್ದಾರೆ.
ಸ್ವತಃ ಕಾರ್ ಡ್ರೈವ ಮಾಡಿದ ಡಿಸಿಎಂ, ತಮ್ಮ ಅನುಭವವನ್ನು ಎಕ್ಸ್ ಖಾತೆಯಲ್ಲಿ “ದಕ್ಷಿಣ ಭಾರತದ ಮೊದಲ ರೋಡ್-ಕಮ್-ಮೆಟ್ರೋ ಮೇಲ್ಸೇತುವೆಯನ್ನು ಇಂದು ಉದ್ಘಾಟಿಸಿ ಸ್ವತಃ ಕಾರ್ ಡ್ರೈವ್ ಮಾಡಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಸಂಪರ್ಕಿಸುವ ಈ ಅತ್ಯಾಧುನಿಕ ಫ್ಲೈಓವರ್ ನಗರದ ಚಲನಶೀಲತೆಗೆ ಹೊಸ ಭಾಷ್ಯ ಬರೆದಿದೆ ಎಂದರೆ ತಪ್ಪಾಗಲಾರದು.” ಎಂದು ಹೇಳಿದ್ದಾರೆ.