Technology
ಅಮೆರಿಕಾ ಗುಪ್ತಚರ ಸಹಾಯಕ ಉಪಗ್ರಹ ಉಡಾವಣೆ ಮಾಡಿದೆ ಸ್ಪೇಸ್ ಎಕ್ಸ್.

ವಾಷಿಂಗ್ಟನ್: ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆಯು ಇಂದು ಅಮೆರಿಕ ಇತಿಹಾಸದಲ್ಲಿ ಮಹತ್ತರವಾದ ಕಾರ್ಯವನ್ನು ಕೈಗೆ ತೆಗೆದುಕೊಂಡಿದೆ. ಅಮೆರಿಕಾ ಗುಪ್ತಚರ ಇಲಾಖೆಗೆ ಸಂಬಂಧಪಟ್ಟಂತಹ ಉಪಗ್ರಹ ಉಡಾವಣೆಯನ್ನು ಸ್ಪೇಸ್ ಎಕ್ಸ್ ಸಂಸ್ಥೆಯು ಇಂದು ಕೈಗೊಂಡಿದೆ. ಈ ರೀತಿಯ ಉಪಗ್ರಹವನ್ನು ಸ್ಪೇಸ್ ಎಕ್ಸ್ ಸಂಸ್ಥೆಯು ಉಡಾವಣೆ ಮಾಡಿದ್ದು ಇದೇ ಮೊದಲಾಗಿದೆ.
ಈ ಯೋಜನೆಯು ಯುಎಸ್ ಎನ್ಆರ್‌ಒದ ಒಂದು ಭಾಗವಾಗಿದೆ. ಈ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಗುಪ್ತಚರ ಕಾರ್ಯಗಳಿಗೆ ಬಾಹ್ಯಾಕಾಶದ ಮೂಲಕ ಇನ್ನಷ್ಟು ಕಣ್ಗಾವಲನ್ನು ಇರಿಸಬಹುದಾಗಿದೆ. ಉಪಗ್ರಹವನ್ನು ಮುಂಜಾನೆ ನಾಲ್ಕು ಗಂಟೆಗೆ, ಕ್ಯಾಲಿಫೋರ್ನಿಯಾದಲ್ಲಿರುವ ಸ್ಪೇಸ್ ಎಕ್ಸ್‌ನ ಉಪಗ್ರಹ ಉಡಾವಣೆ ಕೇಂದ್ರದಿಂದ ಉಡಾಯಿಸಲಾಯಿತು.