ದಾಖಲೆಯೊಂದಿಗೆ ಗೆಲುವು ಸಾಧಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ.
ಹೈದರಾಬಾದ್: ಮಾರ್ಚ್ 27ರಂದು ನಡೆದಂತಹ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ ಹೈದರಾಬಾದ್ ನಡುವಿನ ಪಂದ್ಯ ಇತಿಹಾಸವನ್ನು ಸೃಷ್ಟಿಸಿದೆ. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದಂತಹ 17ನೇ ಐಪಿಎಲ್ ಆವೃತ್ತಿಯ ಎಂಟನೇ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ಅವರು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡರು.
ಮೊದಲ ಇನ್ನಿಂಗ್ಸ್ ಗೆ ಕಾಲಿಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ಗಳನ್ನ ಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಗಳಿಸಿದೆ. 20 ಓವರ್ ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 277 ರನ್ಗಳನ್ನು ಹೈದರಾಬಾದ್ ತಂಡ ಗಳಿಸಿತು. ಈ ಹಿಂದೆ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪುಣೆ ವಾರಿಯರ್ಸ್ ಇಂಡಿಯಾ ತಂಡದ ವಿರುದ್ಧ 263 ರನ್ನುಗಳನ್ನು ಗಳಿಸಿತ್ತು.
27 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ ಸರಿಸಾಟಿ ಆದಂತಹ ಪ್ರದರ್ಶನವನ್ನು ನೀಡಿತು. ಆದರೆ 243 ರನ್ನುಗಳನ್ನು ಗಳಿಸಿದ ಮುಂಬೈ ಇಂಡಿಯನ್ಸ್ ತಂಡ, 31 ರನ್ನುಗಳಿಂದ ಸೋಲನ್ನು ಒಪ್ಪಿಕೊಂಡಿತು. ನಿನ್ನೆಯ ಮ್ಯಾಚ್ ನಲ್ಲಿ ಅಭಿಷೇಕ್ ಶರ್ಮಾ ಅವರು 23 ಬಾಲುಗಳಲ್ಲಿ 63 ರನ್ನುಗಳನ್ನು ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಎನ್ನಿಸಿಕೊಂಡರು.