Sports
ಫೈನಲ್ಸ್ ಬಾಗಿಲು ಯಾರಿಗೆ ತೆರೆಯಲಿದೆ?
ಚೆನ್ನೈ: 2024ರ ಐಪಿಎಲ್ ಆವೃತ್ತಿ ಇನ್ನೇನು ಅಂತ್ಯಗೊಳ್ಳುವ ಹಂತದಲ್ಲಿ ಇದೆ. ಪ್ಲೇ ಆಫ್ ಪಂದ್ಯಗಳಲ್ಲಿ ಇಂದಿನ ಪಂದ್ಯ ಕೊನೆಯದಾಗಿದೆ. ಈಗಾಗಲೇ ಫೈನಲ್ಸ್‌ನಲ್ಲಿ ಕೆಕೆಆರ್ ತಂಡ ಲಗ್ಗೆ ಇಟ್ಟಿದೆ. ಇಂದಿನ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಯಾರು ಫೈನಲ್ಸ್ ಬಾಗಿಲು ತೆರೆಯಲಿದ್ದಾರೆ ಎಂಬುದಕ್ಕೆ ಉತ್ತರ ಇಂದು ಸಿಗಲಿದೆ.
ಐಪಿಎಲ್ ಚೊಚ್ಚಲ ಕಪ್ ಗೆದ್ದಿದ್ದು ರಾಜಸ್ಥಾನ್ ರಾಯಲ್ಸ್ ತಂಡ. ಸ್ಟೇನ್ ವಾರ್ನ್ ನಾಯಕತ್ವದ ಹೊಂದಿದ್ದ ತಂಡ, ಮೊದಲ ಆವೃತ್ತಿಯಲ್ಲಯೇ ತನ್ನ ಪ್ರಾಬಲ್ಯವನ್ನು ಕಾಣಿಸಿತ್ತು. ಅದಾದನಂತರ ಇದುವರೆಗೆ ಈ ತಂಡ ಕಪ್ ಗೆದ್ದಿಲ್ಲ.
ಸನ್ ರೈಸರ್ಸ್ ಹೈದರಾಬಾದ್ ತಂಡ 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲ್ಸ್ ನಲ್ಲಿ ಸೋಲಿಸುವ ಮೂಲಕ ಚೊಚ್ಚಲ ಕಪ್ ಗೆದ್ದಿತ್ತು.
ಈ ಎರಡೂ ತಂಡಗಳಲ್ಲಿ ಯಾವ ತಂಡ ಫೈನಲ್ಸ್ ಪ್ರವೇಶಿಸಿ ತನ್ನ ಎರಡನೇ ಕಪ್ ಗೆಲ್ಲಲಿದೆ ಎಂದು ಕಾದು ನೋಡಬೇಕಾಗಿದೆ.