“45” ಚಿತ್ರದ ಸೆಟ್‌ಗೆ ಭೇಟಿ ನೀಡಿದ ಶ್ರೀ ಬಾಲ್ಕಾನಂದ ಗುರುಗಳು: ಆಶಿರ್ವಾದದಿಂದ ಬದಲಾಯ್ತು ಚಿತ್ರೀಕರಣದ ವಾತಾವರಣ!
ಬೆಂಗಳೂರು: ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪ್ರತಿಭಾವಂತ ನಟ ರಾಜ್ ಬಿ ಶೆಟ್ಟಿ ಅಭಿನಯದ ಹಾಗೂ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ “45” ಚಿತ್ರದ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ.
ಚಿತ್ರದ ಸೆಟ್‌ಗೆ ಇಂದು ವಿಶೇಷ ಅತಿಥಿಯಾಗಿ ಆನಂದಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀ ಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರು ಭೇಟಿ ನೀಡಿ ಚಿತ್ರತಂಡವನ್ನು ಆಶೀರ್ವದಿಸಿದರು. ಗುರುಗಳ ಉಪಸ್ಥಿತಿಯಿಂದ ಚಿತ್ರೀಕರಣ ಸ್ಥಳದಲ್ಲಿ ಭಕ್ತಿ ಭಾವದ ವಾತಾವರಣವು ಮೂಡಿತು.
“ಶ್ರೀಮತಿ ಉಮಾ ರಮೇಶ್ ರೆಡ್ಡಿ ಅವರ ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ “45” ಚಿತ್ರದಲ್ಲಿ ಆಧ್ಯಾತ್ಮಿಕ ಮತ್ತು ಸಾಹಸ ಅಂಶಗಳು ಜೋತೆಯಾಗಿದ್ದು, ಮಹಾತ್ಮರು ಚಿತ್ರತಂಡವನ್ನು ಆಶೀರ್ವದಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ,” ಎಂದು ನಿರ್ಮಾಪಕ ರಮೇಶ್ ರೆಡ್ಡಿ ಸಂತಸ ವ್ಯಕ್ತಪಡಿಸಿದರು.
ಗುರುಗಳು, ತಮ್ಮ ಹರಿಧಾಮ ಸಾಯಿ ಟ್ರಸ್ಟ್ ಮೂಲಕ ಪ್ರತಿದಿನ ಸಾವಿರಾರು ಜನರಿಗೆ ಅನ್ನದಾನ ಮಾಡುವ ತಮ್ಮ ಸಮರ್ಪಣೆಯನ್ನು ಇಲ್ಲಿ ಉಲ್ಲೇಖಿಸಿದರು. ಹಸಿವು ತೀರಿಸುವ ಮಹಾತ್ಮರು ನಮ್ಮ “45” ಚಿತ್ರಕ್ಕೆ ಆರ್ಶೀರ್ವಾದ ನೀಡಿರುವುದು ಚಿತ್ರತಂಡಕ್ಕೆ ವಿಶೇಷ ಉತ್ಸಾಹ ನೀಡಿದೆ.
ಈ ಸಂದರ್ಭದಲ್ಲಿ ನಟ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ, ಸಾಹಸ ನಿರ್ದೇಶಕ ರವಿವರ್ಮ ಮತ್ತು ಚಿತ್ರತಂಡದ ಅನೇಕ ಸದಸ್ಯರು ಉಪಸ್ಥಿತರಿದ್ದರು.