
ಕರ್ನಾಟಕ: ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಇಂದು ದಿನಾಂಕ 25, ಮಾರ್ಚ್ ನಿಂದ ಪ್ರಾರಂಭವಾಗಿದೆ. ಈ ಪರೀಕ್ಷೆಯು ಏಪ್ರಿಲ್ 6, 2024 ರ ತನಕ ಇರಲಿದೆ.
ಕರ್ನಾಟಕದ ಒಟ್ಟು 8,69,968 ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಸಿಸಿಟಿವಿ ಕಣ್ಣುಗಾವಲನ್ನು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿಯೂ ಅಳವಡಿಸಲಾಗಿದೆ ಎಂದು ಬೋರ್ಡ್ ತಿಳಿಸಿದೆ.
ಹಾಗೆ ಇಂದು ಹೋಳಿ ಹಬ್ಬ ಇರುವುದರಿಂದ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಬಣ್ಣಹಚ್ಚುವುದಾಗಲಿ ಹಾಗೂ ಇತರೆ ಸಮಸ್ಯೆಗಳನ್ನು ಒಡ್ಡಬಾರದು ಎಂದು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಜನರಲ್ಲಿ ವಿನಂತಿಸಿಕೊಂಡಿದ್ದಾರೆ.