9 ತಿಂಗಳ ಬಳಿಕ ಭೂ ತಾಯಿಯ ಮಡಿಲು ಸೇರಿದ ಸುನಿತಾ ವಿಲಿಯಮ್ಸ್..

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು 2024 ರ ಜೂನ್ 5 ರಂದು ತಾಂತ್ರಿಕ ಸಮಸ್ಯೆ ನಿವಾರಿಸಲು ಸ್ಟಾರ್ಲೈನರ್ ಬಾಹ್ಯಕಾಶ ಗಗನನೌಕೆ ಮೂಲಕ ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. ಇವರಿಬ್ಬರು ಬಾಹ್ಯಕಾಶಕ್ಕೆ ಹೋಗಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾದರು. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲೋರ್ ಅವರ ಬಾಹ್ಯಕಾಶ ಪ್ರವಾಸ ಇದ್ದದು ಕೇವಲ 8 ದಿನ ಮಾತ್ರ. ಆದರೆ ಅವರನ್ನು ಪುನಃ ಭೂಮಿಗೆ ಕರೆತರಬೇಕಿದ್ದ ಸ್ಪೇಸ್ ಎಕ್ಸ್ ಡ್ರ್ಯಾಗನ್ ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಕೊಂಡ ಹಿನ್ನಲೆ ಅವರು 9 ತಿಂಗಳ ಕಾಲ ಬಾಹ್ಯಕಾಶದಲ್ಲೆ ಬಂಧಿಯಾಗಿದ್ದರು. ಕೊನೆಗೂ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ಬಾಹ್ಯಕಾಶ ಜೀವನವನ್ನು ಭೇದಿಸಿ ಮಾರ್ಚ್ 19 ರ ಬೆಳಗಿನ ಜಾವ 3:27 ಕ್ಕೆ ಫ್ಲೋರಿಡಾದ ಸಮುದ್ರಕ್ಕೆ ಕ್ರೂ-9 ನೌಕೆ ಮೂಲಕ ಬಂದು ಭೂ ತಾಯಿಯ ಮಡಿಲು ಸೇರಿದರು.

ಸ್ಪೇಸ್ ಎಕ್ಸ್ ಡ್ರ್ಯಾಗನ್ ಗಗನನೌಕೆಯಲ್ಲಿ ಕಾಣಿಸಿಕೊಂಡ ದೋಷ ಏನು ?
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಕಾಶದಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾದರು, 8 ದಿನಕ್ಕೆ ಮರಳಿ ಭೂಮಿಗೆ ಸೇರಬೇಕಿತ್ತು, ಆದರೆ ಮರಳಿ ತಮ್ಮನ್ನು ಭೂಮಿಗೆ ಕರೆತರಬೇಕಿದ್ದ ಡ್ರ್ಯಾಗನ್ ರಾಕೆಟ್ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಇವರಿಬ್ಬರು 9 ತಿಂಗಳ ಕಾಲ ಬಾಹ್ಯಕಾಶದಲ್ಲಿ ಉಳಿಯಬೇಕಾಯಿತು. ತಮ್ಮನ್ನು ಪುನಃ ಭೂಮಿಗೆ ಹಿಂದಿರುಗಿಸಬೇಕಿದ್ದ ಡ್ರ್ಯಾಗನ್ ಗಗನನೌಕೆಯ ಥ್ರಸ್ಟರ್ನಲ್ಲಿ ಒಂದು ಸಮಸ್ಯೆ ಕಾಣಿಸಿಕೊಂಡಿತು. ಗಗನನೌಕೆಯಲ್ಲಿ ಇಂಧನ ಪೂರೈಕೆ ಆಗಬೇಕಿದ್ದ ಜಾಗದಲ್ಲಿ ಹೀಲಿಯಂ ಸೋರಿಕೆಯಾಯಿತು. ಈ ದೋಷಪೂರಿತ ನೌಕೆಯಲ್ಲಿಯೇ ಹಿಂತಿರುಗಿ ಬಂದಿದ್ದರೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬರುತಿದ್ದ ಡ್ರ್ಯಾಗನ್ ಗಗನನೌಕೆ ಬ್ಲಾಸ್ಟ್ ಆಗುವ ಆಪಾಯವಿತ್ತು. ಈ ಕಾರಣದಿಂದ ನಾಸಾ ಇವರಿಬ್ಬರನ್ನು ಬಾಹ್ಯಕಾಶದಲ್ಲೆ ಇರುವ ವ್ಯವಸ್ಥೆಯನ್ನು ಮಾಡಿತು.

9 ತಿಂಗಳ ಕಾಲ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಏನು ಮಾಡಿದರು ?
59 ವರ್ಷದ ಸುನಿತಾ ವಿಲಿಯಮ್ಸ್ ಬಾಹ್ಯಕಾಶದಲ್ಲಿ ಹಲವು ವೈಜ್ಞಾನಿಕ ಸಂಶೋಧನೆಯಲ್ಲಿ ಭಾಗಿಯಾಗಿದ್ದರು, 62 ಗಂಟೆ 9 ನಿಮಿಷಗಳ ಕಾಲ ಬಾಹ್ಯಕಾಶದಲ್ಲಿ ನಡೆದಿದ್ದಾರೆ, ಅಲ್ಲಿರುವ ಹಲವು ಸಮಸ್ಯೆಗಳನ್ನು ನಿವಾರಿಸಿದ್ದಾರೆ, 150 ಕ್ಕೂ ಹೆಚ್ಚು ಪ್ರಯೋಗಳಲ್ಲಿ ಭಾಗಿಯಾಗಿ 900 ಗಂಟೆಗಳಿಗಿಂತ ಹೆಚ್ಚು ಸಂಶೋಧನೆ ನಡೆಸಿದ್ದಾರೆ, ಬಾಹ್ಯಕಾಶದ ನಡಿಗೆ ಜೋತೆ ಫುಟ್ಬಾಲ್ ಮೈದಾನದ ಗಾತ್ರವಿರುವ ಅಂತರಾಷ್ರೀಯ ಬಾಹ್ಯಕಾಶ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾರೆ, ಅಲ್ಲಿರುವ ಹಳೆಯ ಉಪಕರಣಗಳನ್ನು ಬದಲಾಯಿಸಿ ಮತ್ತು ಅಲ್ಲಿದ್ದ ಕಸವನ್ನು ಭೂಮಿಗೆ ಕಳುಹಿಸಿದ್ದಾರೆ ಎಂದು ನಾಸಾ ಹೇಳಿದೆ.
ಬಾಹ್ಯಕಾಶದಲ್ಲಿ ಸುನಿತಾ ವಿಲಿಯಮ್ಸ್ಗೆ ಆಹಾರ ನೀರು ಹೇಗೆ ?
ನವಮಾಸಗಳ ಕಾಲ ಬಾಹ್ಯಕಾಶದಲ್ಲಿ ಬಂಧಿಯಾಗಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಆಹಾರವನ್ನು ಭೂಮಿಯಿಂದಲೆ ಪೂರೈಸಲಾಗುತಿತ್ತು. ಅಂತರಾಷ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವದರಿಂದ ಊಟ, ನೀರು ಕೂಡ ಚಲ್ಲಿದರೆ ಆದು ಗಾಳಿಯಲ್ಲಿ ತೆಲುತ್ತಿತು. ಗಗನಯಾತ್ರಿಗಳು ಒಂದು ದಿನಕ್ಕೆ 1.7 ಕೆಜಿ ಆಹಾರವನ್ನು ಸೇವಿಸುತ್ತಿದ್ದರು. ಇವರಿಗೆ ಏಕದಳ ಧಾನ್ಯ, ಹಾಲಿನ ಪುಡಿ, ಪಿಜ್ಜಾ, ಹುರಿದ ಮಾಂಸ, ಮೀನು, ಹಣ್ಣು, ತರಕಾರಿಗಳನ್ನು ಫ್ರೀಜ್ ಅಥವಾ ಒಣಗಿಸಿ ಪ್ಯಾಕ್ ಮಾಡಿದ ಆಹಾರವನ್ನು ಸ್ಪೇಸ್ಗೆ ಭೂಮಿಯಿಂದಲೆ ಸಪ್ಲೈ ಮಾಡಲಾಗುತ್ತಿತು. ಭೂಮಿಯಿಂದ ಕಳುಹಿಸಿದ ಆಹಾರವನ್ನು ಪುನಃ ಫುಡ್ ವಾರ್ಮರ್ ಬಳಸಿ ಸುಲಭವಾಗಿ ಬಿಸಿ ಮಾಡಿಕೊಳ್ಳುವಂತೆ ಅನುಕೂಲ ಮಾಡಲಾಗಿತು. ಗಗನಯಾತ್ರಿಗಳು ತಮ್ಮ ಅಹಾರವನ್ನು ಲೋಹದ ಮ್ಯಾಗ್ನೆಟಿಕ್ ಟ್ರೇಗಳಲ್ಲಿ ಊಟವನ್ನು ಮಾಡುತಿದ್ದರು. ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣ ತ್ಯಾಜ್ಯಾ ಮರುಬಳಿಕೆಯ ವ್ಯವಸ್ಥೆಯನ್ನು ಹೊಂದಿತ್ತು. ಅದು ಗಗನಯಾತ್ರಿಗಳ ಮೂತ್ರ ಮತ್ತು ಬೆವರನ್ನು ಶುದ್ಧ ನೀರಾಗಿ ಪರಿವರ್ತಿಸುತಿತ್ತು.
ಸಮುದ್ರದಲ್ಲಿ ಸೇಫ್ ಲ್ಯಾಂಡಿಂಗ್..

9 ತಿಂಗಳ ಕಾಲ ಅಂತರಾಷ್ಟ್ರೀಯ ಬಾಹ್ಯಕಾಶದಲ್ಲಿ ಕಾಲ ಕಳೆದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಕೊನೆಗೂ ಮಾರ್ಚ್ 19 ರ ಬೆಳಗಿನ ಜಾವ 3:27 ಕ್ಕೆ ಫ್ಲೋರಿಡಾದ ಸಮುದ್ರಕ್ಕೆ ಕ್ರೂ-9 ನೌಕೆ ಮೂಲಕ ಸೇಫ್ ಲ್ಯಾಂಡಿಂಗ್ ಮಾಡಿಸಲಾಯಿತು. ಅವರನ್ನು ಲ್ಯಾಂಡ್ ಆದ ಕೂಡಲೆ ಮನೆಗೆ ಕಳುಹಿಸದೆ ಭೂಮಿಯ ವಾತವರಣಕ್ಕೆ ಹೊಂದಿಕೊಳ್ಳಲು ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ನವಮಾಸಗಳ ಕಾಲ ಬಾಹ್ಯಕಾಶದ ಗರ್ಭದಲ್ಲಿ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ 19 ರಂದು ಸುರಕ್ಷಿತವಾಗಿ ಭೂ ತಾಯಿಯ ಮಡಿಲು ಸೇರಿದ್ದು, ಕೋಟಿ ಕೋಟಿ ಜನರ ಪ್ರಾರ್ಥನೆ ಫಲಿಸಿದಂತಾಗಿದೆ.
ಲೋಕನಾಥ್ ಹೂಗಾರ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ