Sports
ಸನ್ ರೈಸರ್ಸ್ ಹೈದರಾಬಾದ್‌ಗೆ ಮಣಿದ ಚೆನ್ನೈ.
ಹೈದರಾಬಾದ್: ನಿನ್ನೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ್ನು, ಸನ್ ರೈಸರ್ಸ್ ಹೈದರಾಬಾದ್ ತಂಡ ಮಣಿಸಿದೆ. ಹೈದರಾಬಾದ್ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.
18ನೇ ಓವರ್ ನಲ್ಲಿ 6 ರನ್ನುಗಳ ಆವಶ್ಯಕತೆ ಹೊಂದಿತ್ತು ಹೈದರಾಬಾದ್ ತಂಡ. ದೀಪಕ್ ಚಹಾರ್ ಅವರ ಮೊದಲ ಎಸೆತಕ್ಕೆ ನಿತೀಶ್ ಕುಮಾರ್ ಸಿಕ್ಸರ್ ಬಾರಿಸುವ ಮೂಲಕ ಹೈದರಾಬಾದ್ ತಂಡವನ್ನು ಗೆಲ್ಲಿಸಿದರು. ಇದು ಹೈದರಾಬಾದ್ ತಂಡದ ಎರಡನೇ ಗೆಲುವಾಗಿದೆ.
ಅಂಕಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ, ಈ ಗೆಲುವಿನ ಮೂಲಕ 4 ಅಂಕಗಳನ್ನು ಗಳಿಸಿ, 5ನೇ ಸ್ಥಾನಕ್ಕೆ ಏರಿದೆ.