ನವದೆಹಲಿ: ಅಬಕಾರಿ ನೀತಿ ಪ್ರಕರಣದ ಅಡಿಯಲ್ಲಿ ಜಾರಿ ನಿರ್ದೇಶನದ ಬಂಧನದಲ್ಲಿ ಇದ್ದ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ಜಾಮಿನನ್ನು ಕರುಣಿಸಿದೆ. ಆದರೆ ಈ ಜಾಮೀನು ಬರೋಬ್ಬರಿ ಐದು ಷರತ್ತುಗಳನ್ನು ಒಳಗೊಂಡಿದೆ. ಅವುಗಳೆಂದರೆ:
- ಅರವಿಂದ್ ಕೇಜ್ರಿವಾಲ್ ಅವರು ರೂ 50,000 ಜಾಮೀನು ಮೊತ್ತವನ್ನು ಪಾವತಿಸಿ ಮತ್ತು ಅದೇ ಮೊತ್ತಕ್ಕೆ ಜಾಮೀನು (ಗ್ಯಾರೆಂಟರ್) ಒದಗಿಸಬೇಕು.
- ಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಸಚಿವಾಲಯದಿಂದ ದೂರವಿರಬೇಕು.
- ಅಗತ್ಯವಿದ್ದಲ್ಲಿ ಮತ್ತು ಲೆಫ್ಟಿನೆಂಟ್ ಗವರ್ನರ್ ಅನುಮೋದನೆಯೊಂದಿಗೆ ಮಾತ್ರ ಅಧಿಕೃತ ಫೈಲ್‌ಗಳಿಗೆ ಸಹಿ ಮಾಡಬೇಕು.
- ಕೇಜ್ರಿವಾಲ್ ಅವರು ಪ್ರಸ್ತುತ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಪ್ರತಿಕ್ರಿಯಿಸುವಂತಿಲ್ಲ.
- ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ಫೈಲ್‌ಗಳನ್ನು ಪ್ರವೇಶಿಸುವಂತಿಲ್ಲ.
ಸುಪ್ರೀಂ ಕೋರ್ಟ್ ಮಂಜೂರು ಮಾಡಿದ ಈ ಮಧ್ಯಂತರ ಜಾಮಿನನ್ನು ಮುಂದೆ ವಿಸ್ತರಿಸಲುಬಹುದು. ಹಾಗೆಯೇ ಇದಕ್ಕಿಂತ ದೊಡ್ಡ ಪೀಠವು ಈ ಜಾಮೀನನ್ನು ಹಿಂಪಡೆಯಲುಬಹುದು. ಎಂದು ಕೊನೆಯಲ್ಲಿ ತಿಳಿಸಿದೆ.