Bengaluru

ಸುಸ್ಥಿರ ನಗರಗಳ ನಿರ್ಮಾಣಕ್ಕಾಗಿ ಒಡಂಬಡಿಕೆ ಮಾಡಿಕೊಂಡ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಹಾಗೂ ಕ್ಲೈಮೇಟ್ ರೈಸ್ ಆಲಯನ್ಸ್.

ದಿನದಿಂದ ದಿನಕ್ಕೆ ರಾಜ್ಯದ ನಗರಗಳು ಹವಾಮಾನ ವೈಪರೀತ್ಯಗಳಿಂದಾಗಿ ದುಷ್ಪರಿಣಾಮಗಳನ್ನು ಅನುಭವಿಸುತ್ತಿವೆ. ನಮ್ಮ ರಾಜ್ಯದ ನಗರಗಳನ್ನು ಈ ವೈಪರಿತ್ಯಗಳಿಂದ ಚೇತರಿಕೆ ಮಾಡಿ ಸಜ್ಜುಗೊಳಿಸಿ ಸುಸ್ಥಿರ ನಗರಗಳಾಗಿಸುವ ನಿಟ್ಟಿನಲ್ಲಿ ಕ್ಲೈಮೇಟ್ ರೈಸ್ ಅಲಯನ್ಸ್, ಜನ ಅರ್ಬನ್ ಸ್ಪೇಸ್ ಫೌಂಡೇಶನ್, ಡಬ್ಲ್ಯೂಆರ್‌ಐ ಇಂಡಿಯಾ, ಜನಾಗ್ರಹ, ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ರೌಂಡ್ ಟೇಬಲ್, ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್, ಮತ್ತು ದಿ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಅಂಡ್ ಪಾಲಿಸಿ ಸಂಸ್ಥೆಗಳೊಂದಿಗೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಕೈಜೋಡಿಸಿದೆ ಎಂದು ಉಪಾಧ್ಯಕ್ಷರಾದ ಪ್ರೊ. ಎಂ.ವಿ. ರಾಜೀವ್ ಗೌಡ ಹೇಳಿದರು.

“ಕರ್ನಾಟಕದ ನಗರಗಳು ಹವಾಮಾನ ವೈಪರಿತ್ಯಗಳಿಂದ ಚೇತರಿಸಿಕೊಳ್ಳುವಂತೆ ಅಭಿವೃದ್ಧಿಗೊಳಿಸಲು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಬದ್ಧವಾಗಿದೆ. ಕ್ಲೈಮೆಟ್ ರೈಸ್ ಅಲಯನ್ಸ್ ನೊಂದಿಗೆ ನಮ್ಮ ಸಹಯೋಗ ಮತ್ತು ಅವರ ಜ್ಞಾನ ಸಂಶೋಧನೆ ವಿಶ್ಲೇಷಣೆ ಮತ್ತು ಆಳವಾದ ಅನುಭವ ನಮ್ಮ ನಗರ ಪರಿಸರವನ್ನು ರಕ್ಷಿಸುವ ಮತ್ತು ನಮ್ಮ ಸಮುದಾಯಗಳ ಯೋಗ ಕ್ಷೇಮವನ್ನು ಹೆಚ್ಚಿಸುವ ಪರಿವರ್ತನೆಗೆ ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಸಹಯೋಗವನ್ನು ಆರು ಪ್ರಮುಖ ವಿಷಯಗಳ ಮೇಲೆ ಕೇಂದ್ರಿಕರಿಸುತ್ತಿದ್ದೇವೆ,”

ಈ ಒಡಂಬಡಿಕೆಯಿಂದ ನಮ್ಮ ನಗರಗಳಿಗೆ ಆಗುವಂತಹ ಅನುಕೂಲಗಳು:-

  • ನಗರಗಳಲ್ಲಿ ನೀರಿನ ಚೇತರಿಕೆಯ ಯೋಜನೆಗಳ ಮೂಲಕ ಸಮಗ್ರ ನೀರಿನ ನಿರ್ವಹಣೆಗಳು ಅಭಿವೃದ್ಧಿಪಡಿಯಲಿದೆ.
  • ಪಾದಾಚಾರಿಗಳಿಗೆ ಅನುಕೂಲ ಮಾಡಿಕೊಡುವ ಮತ್ತು ವಾಸ ಯೋಗ್ಯ ನೆರೆಹೊರೆಯನ್ನು ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸಲಾಗುವುದು.
  • ನಗರ ಉಷ್ಣತೆ ಮತ್ತು ಪ್ರವಾಹದ ಚೇತರಿಕೆಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಲಾಗುವುದು.
  • ಸಂಪನ್ಮೂಲದ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಕಡಿಮೆ ಇಂಗಾಲವನ್ನು ಹೊರಸುಸುವ ನಗರಗಳ ಅಭಿವೃದ್ಧಿಗೊಳಿಸಲಾಗುವುದು.
  • ಯುವ, ನಾವಿನ್ಯತೆಯ ಮತ್ತು ಸುಸ್ಥಿರ ಪಾಲ್ಗೊಳ್ಳುವಿಕೆಯ ಯೋಜನೆಗಳನ್ನು ರೂಪಿಸಲಾಗುವುದು.
  • ಆಡಳಿತ, ಸಾಂಸ್ಥಿಕ ಕಾರ್ಯ ವಿಧಾನಗಳನ್ನು ಸಕ್ರಿಯೆಗೊಳಿಸುವ ಮೂಲಕ ಹವಾಮಾನ ಬದಲಾವಣೆಯ ಅಪಾಯಗಳು ಮತ್ತು ದುರ್ಬಲತೆಗಳು ಕಡಿಮೆಗೊಳಿಸಲಾಗುವುದು.

ಇಷ್ಟಲ್ಲದೇ, ಹವಾಮಾನ ವೈಪರೀತ್ಯಗಳಿಂದ ಚೇತರಿಕೆಗೆ ಸಜ್ಜುಗೊಳಿಸಿ ಸುಸ್ಥಿರ ನಗರಗಳ ನಿರ್ಮಾಣಕ್ಕಾಗಿ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸೆಲ್‌ನ್ನು ಪ್ರಾರಂಭಿಸಲಾಗುವುದು ಎಂದು ಉಪಾಧ್ಯಕ್ಷರು ತಿಳಿಸಿದ್ದಾರೆ.

Show More

One Comment

Leave a Reply

Your email address will not be published. Required fields are marked *

Related Articles

Back to top button