Politics
ಯೂಟ್ಯೂಬರ್ ಧ್ರುವ ರಾಠೀ ಹೆಸರು ಪ್ರಸ್ತಾಪಿಸಿದ ಸ್ವಾತಿ ಮಲಿವಾಲ್.
ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪಿಎ ವಿರುದ್ಧ, ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಆಮ್ ಆದ್ಮಿ ಪಕ್ಷದ ವಿರುದ್ಧ ಸೆಟೆದು ನಿಂತಿರುವ ಸ್ವಾತಿ ಮಲಿವಾಲ್ ಅವರು, ಪ್ರಸ್ತುತ ಬಾರಿ ಸುದ್ದಿ ಮಾಡಿದ ಧ್ರುವ ರಾಠೀ ಅವರ ವಿರುದ್ಧ ಆರೋಪ ಮಾಡಿದ್ದಾರೆ.
ತನ್ನ ವಿರುದ್ಧ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ‘ಕೊಲೆ’ ಹಾಗೂ ‘ಅತ್ಯಾಚಾರ’ ಮಾಡುವುದಾಗಿ ಬೆದರಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಹಾಗೆಯೇ ಯೂಟ್ಯೂಬರ್ ಧ್ರುವ ರಾಠೀ ತನ್ನ ವಿರುದ್ಧ ದ್ವೇಷ ಭರಿತ ಪ್ರಚಾರ ಮಾಡುವದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕೆಲವು ಸ್ಕ್ರೀನ್ ಶೋಟ್‌ಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.