ಅಮೆಜಾನ್ ಡೆಲಿವರಿ ಬಾಯ್ಸ್‌ಗಳಿಗೆ ಸಿಹಿ ಸುದ್ದಿ!: ಬೆಂಗಳೂರಿನಲ್ಲಿ ಪ್ರಾರಂಭ ಆಗಲಿದೆ “ಆಶ್ರಯ” ಯೋಜನೆ..!
ಬೆಂಗಳೂರು: ಅಮೆಜಾನ್ ಇಂಡಿಯಾ ತನ್ನ ಮಹತ್ವಾಕಾಂಕ್ಷಿ “ಆಶ್ರಯ” ಯೋಜನೆಯನ್ನು ಬೆಂಗಳೂರಿಗೆ ವಿಸ್ತರಿಸಿದೆ. ಡೆಲಿವರಿ ಅಸೋಸಿಯೇಟ್‌ಗಳ ಕಾಳಜಿಗೆ ಮತ್ತೊಂದು ಹೆಜ್ಜೆಯಾಗಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ಕಾಕ್ಸ್ ಟೌನ್‌ನಲ್ಲಿ ಎರಡು ವಿಶ್ರಾಂತಿ ಕೇಂದ್ರಗಳು ಲಾಂಚ್ ಆಗಲಿವೆ. ಈ ಹಿಂದೆ, ಮೊದಲ ಕೇಂದ್ರವು ಗುರುಗ್ರಾಮದಲ್ಲಿ ಉದಯಸಾ ಫೌಂಡೇಶನ್ ಸಹಯೋಗದಲ್ಲಿ ಆಗಸ್ಟ್‌ನಲ್ಲಿ ಆರಂಭಿಸಲ್ಪಟ್ಟಿತ್ತು.
ಅಮೆಜಾನ್ ಲಾಜಿಸ್ಟಿಕ್ಸ್ ಇಂಡಿಯಾ ಉಪಾಧ್ಯಕ್ಷ ಕರುಣ ಶಂಕರ್ ಪಾಂಡೆ ಅವರ ಪ್ರಕಾರ, “ಈ ವಿಶ್ರಾಂತಿ ಕೇಂದ್ರಗಳು ನಮ್ಮ ಡೆಲಿವರಿ ಅಸೋಸಿಯೇಟ್‌ಗಳ ಅನುಭವವನ್ನು ಸುಧಾರಿಸಲು ಮತ್ತು ಅವರ ಕ್ಷೇಮವನ್ನು ಹೆಚ್ಚಿಸಲು ತುಂಬಾ ಮುಖ್ಯ. ಸೂಕ್ತ ಸೌಲಭ್ಯಗಳೊಂದಿಗೆ ವಿಶ್ರಾಂತಿಗಾಗಿ ಸಮರ್ಪಿತ ಸ್ಥಳಗಳನ್ನು ಒದಗಿಸುವ ಮೂಲಕ, ಡೆಲಿವರಿ ಅಸೋಸಿಯೇಟ್‌ಗಳಿಗೆ ಆರಾಮದಾಯಕ ಪರಿಸರವನ್ನು ಸೃಷ್ಟಿಸಲು ನಾವು ಬದ್ಧ.” ಎಂದಿದ್ದಾರೆ.
ಈ ಕೇಂದ್ರಗಳು, ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸಲಿದ್ದು, ಯಾವುದೇ ಡೆಲಿವರಿ ಅಸೋಸಿಯೇಟ್‌ಗೆ ಉಚಿತವಾಗಿ 30 ನಿಮಿಷಗಳ ಕಾಲ ಬಳಸಲು ಅವಕಾಶವಿದೆ. ಇಲ್ಲಿ ಕುಳಿತುಕೊಳ್ಳಲು ಅನುಕೂಲಕರ ಸೀಟಿಂಗ್, ತಾಜಾ ಕುಡಿಯುವ ನೀರು, ಮೊಬೈಲ್ ಚಾರ್ಜಿಂಗ್ ಸ್ಟೇಷನ್‌ಗಳ ಸೌಲಭ್ಯವನ್ನು ನೀಡಲಾಗುತ್ತದೆ.
ಕೇಂದ್ರಗಳ ಸೌಲಭ್ಯಗಳನ್ನು ಇತರ ಕಂಪನಿಗಳ ಡೆಲಿವರಿ ಅಸೋಸಿಯೇಟ್‌ಗಳು ಕೂಡ ಬಳಸಬಹುದಾಗಿದ್ದು, ಇಡೀ ಸಮುದಾಯಕ್ಕೆ ಪ್ರಯೋಜನ ಕಲ್ಪಿಸುತ್ತವೆ. ಗೂಗಲ್ ಮ್ಯಾಪ್‌ನಲ್ಲಿ ಈ ಸ್ಥಳಗಳನ್ನು ಸೇರಿಸಲಾಗಿದ್ದು, ಸುಲಭವಾಗಿ ಇದ್ದು ಹೋಗಬಹುದಾಗಿದೆ.
ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಹೆಚ್ಚುವರಿ ಕಾರ್ಮಿಕ ಆಯುಕ್ತ ಜಿ. ಮಂಜುನಾಥ್ ಇತರ ಉದ್ಯೋಗದಾತರು ಕೂಡ ಡೆಲಿವರಿ ಅಸೋಸಿಯೇಟ್‌ಗಳಿಗಾಗಿ ಇದೇ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಉತ್ತೇಜಿಸಿದರು.
ಇದೇ ಸಂದರ್ಭದಲ್ಲಿ, ಅಮೆಜಾನ್ ಡೆಲಿವರಿ ಅಸೋಸಿಯೇಟ್‌ಗಳ ಅನುಕೂಲಕ್ಕಾಗಿ ಅಂಬುಲೆನ್ಸ್ ಸೇವೆ, ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮ, ಟ್ರಕ್ ಡ್ರೈವರ್‌ಗಳಿಗಾಗಿ “ಸುಶ್ರುತ” ಯೋಜನೆ, ಹಾಗು ಅಸೋಸಿಯೇಟ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ “ಪ್ರೊತಿಧಿ” ಶಿಷ್ಯವೇತನ ನೀಡುವ ಯೋಜನೆಗಳನ್ನು ಸಹ ಜಾರಿಗೆ ತಂದಿದೆ.