Sports
ಟಿ-20 ಫೈನಲ್; ಭಾರತವನ್ನು ಎದುರಿಸಲಿದೆ ಸೌತ್ ಆಫ್ರಿಕಾ.

ಬಾರ್ಬಡೋಸ್: ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಕೊನೆಯ ಹಂತಕ್ಕೆ ಬಂದಿದೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು. ಈ ಪಂದ್ಯವು ಬಾರ್ಬಡೋಸ್ ನಲ್ಲಿ ಇರುವ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ವೀಕ್ಷಿಸಲು ಲಕ್ಷಾಂತರ ಅಭಿಮಾನಿಗಳು ಬರಲಿದ್ದಾರೆ.
ಐಡೆನ್ ಮಾರ್ಕ್ರಾಮ್ ನಾಯಕತ್ವದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದೆ. ಪ್ರತಿಸಲವೂ ವಿಶ್ವಕಪ್ ಪಂದ್ಯಾವಳಿಯಲ್ಲಿ ಎಡವಿ, ‘ಚೋಕರ್ಸ್’ ಎಂಬ ಹಣೆಪಟ್ಟಿ ಪಡೆದಿರುವ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ತನ್ನ ಭಾಗ್ಯದ ಬಾಗಿಲನ್ನು ತೆರೆಯಲಿದೆಯೇ?
ಆತ್ಮವಿಶ್ವಾಸ ತುಂಬಿದ ಭಾರತ ಕ್ರಿಕೆಟ್ ತಂಡ, ಈ ಬಾರಿ ಮೂರನೇ ಬಾರಿಗೆ ಟಿ-20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಭಾರತ ಕೊನೆಯ ಬಾರಿ 2007ರಲ್ಲಿ ಧೋನಿ ಅವರ ನಾಯಕತ್ವದಲ್ಲಿ ಟಿ-20 ವಿಶ್ವಕಪ್ ಗೆದ್ದಿತ್ತು. ಈ ಬಾರಿ ಎರಡನೇ ಟಿ-20 ವಿಶ್ವಕಪ್ ಭಾರತವನ್ನು ತಲುಪಲಿದೆಯೇ?