Sports
ಟಿ-20 ವಿಶ್ವಕಪ್ 2024: ಭಾರತ ವಿರುದ್ಧ ಅಫ್ಘಾನಿಸ್ತಾನ.
ಬಾರ್ಬಡೋಸ್: 2024ರ ಟಿ-20 ಕ್ರಿಕೆಟ್ ವಿಶ್ವಕಪ್ ನಲ್ಲಿ ಇಂದು ಭಾರತ ಕ್ರಿಕೆಟ್ ತಂಡ, ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಬಾರ್ಬಡೋಸ್‌ನ ಬ್ರಿಡ್ಜ್ ಟೌನ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದೆ.
ಇದು ಎರಡನೇ ಗ್ರೂಪ್ ಸ್ಟೇಜ್‌ನ ಮೊದಲ ಪಂದ್ಯವಾಗಿದೆ. ಹಿಂದಿನ ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭಾರತ ಪಡೆದುಕೊಂಡಿತ್ತು. ಗ್ರೂಪ್ ಒಂದರಲ್ಲಿ ನಾಲ್ಕು ತಂಡಗಳಿವೆ. ಅವುಗಳು, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಮತ್ತು ಭಾರತ.